ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ಭರ್ತಿಗೂ ಮುನ್ನ ಡ್ಯಾಂನಿಂದ ಅಧಿಕಾರಿಗಳು ಜೂನ್ ತಿಂಗಳ ಕೋಟಾ ಮುಗಿಸಲು ತಮಿಳುನಾಡಿಗೆ ಎರಡು ಸಾವಿರ ಕ್ಯೂಸೆಕ್ ನೀರನ್ನು ಬಿಡುತ್ತಿದ್ದಾರೆ. ಅಧಿಕಾರಿಗಳ ಈ ನಡೆಯನ್ನು ಕಂಡು ಮಂಡ್ಯದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಜಲಾಶಯಕ್ಕೆ ಸದ್ಯ 19,728 ಕ್ಯೂಸೆಕ್ ಒಳಹರಿವು ಬರುತ್ತಿರುವ ಕಾರಣ, 124.80 ಅಡಿ ಸಾಮರ್ಥ್ಯವಿರುವ ಕೆಆರ್‌ಎಸ್ ನಲ್ಲಿ 91.80 ಅಡಿ ಮಾತ್ರ ಭರ್ತಿಯಾಗಿದೆ. ಹೀಗಿರುವಾಗ ತಮಿಳುನಾಡಿಗೆ ಅಧಿಕಾರಿಗಳು ಜೂನ್ ತಿಂಗಳ ಕೋಟಾ ಮುಗಿಸಲು ಎರಡು ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡುತ್ತಿದ್ದಾರೆ. ಇದು ಮಂಡ್ಯ ಭಾಗದ ರೈತಾಪಿ ವಲಯದ ಆಕ್ರೋಶಕ್ಕೆ ಗುರಿಯಾಗಿದೆ. ಇದನ್ನೂ ಓದಿ: ವೈಯಕ್ತಿಕ ದ್ವೇಷಕ್ಕೆ ಬಲಿಯಾದ ತೆಂಗು, ಅಡಿಕೆ ಸಸಿಗಳು
Advertisement
Advertisement
ಇದೀಗ ಮುಂಗಾರು ಪ್ರಾರಂಭವಾಗಿ ಮಳೆ ಬಿರುಸುಕಾಣುತ್ತಿದೆ. ಈ ನಡುವೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆಯ ಪ್ರಮಾಣವು ಸಹ ಕಡಿಮೆಯಾಗುತ್ತಿದೆ. ಹೀಗಾಗಿ ಜಲಾಶಯ ಭರ್ತಿಯಾಗುವುದು ತಡವಾಗಬಹುದು, ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಎಷ್ಟು ಸರಿ ಎಂದು ರೈತರು ಪ್ರಶ್ನೆ ಮಾಡಿದ್ದಾರೆ.
Advertisement