– 10 ವರ್ಷದ ನಂತರ ಅಪಾಯವಾದರೆ ಹೊಣೆ ಯಾರು?
– ನನ್ನ ಹೇಳಿಕೆಯನ್ನು ತಿರುಚಿ, ತೇಜೋವಧೆ
ಮಂಡ್ಯ: ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಂಡ್ಯದ ಕೆಆರ್‌ಎಸ್ ಕಾವೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ ಅಂಬರೀಶ್, ಡ್ಯಾಂ ಎಷ್ಟು ಲೈನ್ ಇದೆ, ಎಷ್ಟು ವಿಸ್ತಾರವಿದೆ ಎನ್ನುವುದು ಎಲ್ಲರಿಗೂ ಗೊತ್ತು. ಅದರಲ್ಲಿ ಸಣ್ಣಪುಟ್ಟ ಬಿರುಕು ಕೂಡ ಆಗುತ್ತೆ. ಏರ್ ಕ್ರ್ಯಾಕ್ ಅಂತಾ ಕೂಡ ಹೇಳ್ತಾರೆ. ಗ್ರೌಟಿಂಗ್ ಮೂಲಕ ಅದನ್ನು ಮುಚ್ಚುತ್ತಾರೆ. ಆದರೆ ಬಿರುಕಾಗಿರೋದು ಸತ್ಯ, ಅದನ್ನು ಗ್ರೌಟಿಂಗ್ ಮೂಲಕ ಮುಚ್ಚುತ್ತಿದ್ದಾರೆ ಎಂದು ತಿಳಿಸಿದರು.
Advertisement
Advertisement
ಅಪಾಯ ಪ್ರಮಾಣ ಪತ್ರದ ಬಗ್ಗೆ ಸರ್ಟಿಫಿಕೇಟ್ ಕೊಡುವ ಅಧಿಕಾರಿ ನಾವಲ್ಲ ಅಂತಾ ನೀರಾವರಿ ಅಧಿಕಾರಿಗಳು ಹೇಳಿದ್ದಾರೆ. ಸರ್ಟಿಫಿಕೇಟ್ ಕೊಡಲೂ ನಮ್ಮಲ್ಲಿ ಯಾರಿಗೂ ಅಧಿಕಾರವಿಲ್ಲ. ಅವರದ್ದೆ ಆದ ಟೆಕ್ನಿಕಲ್ ಕಮಿಟಿ ಬರಬೇಕಿದೆ. ಕ್ರ್ಯಾಕ್ ಆಗುವ ಮುಂಚೆ ಎಚ್ಚರಿಕೆ ವಹಿಸಬೇಕಿದೆ. ಕೊರೊನಾ ಬಂದು 10 ದಿನದ ನಂತರ ಆಸ್ಪತ್ರೆಗೆ ಹೋದ್ರೆ ಏನು ಪ್ರಯೋಜನ? ಮೊದಲೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಹಾಗೆ ಇದು ಕೂಡ ಇವತ್ತು, ನಾಳೆ ಅಪಾಯ ಇಲ್ಲ. ಐದು, ಹತ್ತು ವರ್ಷದ ನಂತರ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
Advertisement
ಕೆಆರ್‍ಎಸ್ ಅಣೆಕಟ್ಟೆಯ 20 ಕಿ.ಮೀ. ರೆಡಿಯಸ್ ನಲ್ಲಿ ಗಣಿಗಾರಿಕೆ ನಡೆಯಬಾರದು. ಈಗಾಗಲೇ ಈ ಬಗ್ಗೆ ಮೈನಿಂಗ್ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ನಾನು ಲೀಗಲ್ ಆಗಿರೋ ಗಣಿಗಾರಿಕೆ ರದ್ದು ಮಾಡಿ ಅಂತಾ ಹೇಳಿಲ್ಲ. ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯವಾಗುವ ರೀತಿ ಇದ್ದರೆ ಗಣಿಗಾರಿಕೆ ಬೇಡ ಎಂದು ಹೇಳಿದ್ದೇನೆ. 2019 ರಲ್ಲೇ ಸಂಸತ್‍ನಲ್ಲಿ ಈ ಪ್ರಸ್ತಾಪವನ್ನು ಇಟ್ಟಿದ್ದೆ. ಆರಂಭದಿಂದಲೂ ನನ್ನ ಹೇಳಿಕೆಯನ್ನು ತಿರುಚಲಾಗುತ್ತಿದೆ. ನನ್ನ ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ ಎಂದು ವಿರೋಧಿಸಿದವರಿಗೆ ತಿರುಗೇಟು ನೀಡಿದರು.
Advertisement
ಅಧ್ಯಯನ ನಡೆಯಬೇಕು: ಪೊಲೀಸ್, ಮೈನಿಂಗ್, ಡ್ಯಾಂ ಸೆಕ್ಯೂರಿಟಿ ಟೀಂ ಎಲ್ಲರೂ ಕೂಡ ಒಟ್ಟಿಗೆ ಸೇರಿ ಕೆಲಸ ಮಾಡಬೇಕು. ಕಣ್ಣಿಗೆ ಕಾಣುವ ರೀತಿ ಬಿರುಕು ಕಾಣುತ್ತಿಲ್ಲ. ಇದರ ಬಗ್ಗೆ ವಿಸ್ತ್ರತ ಅಧ್ಯಯನ ಆಗಬೇಕಿದೆ. ಸಣ್ಣ ಪುಟ್ಟ ಬಿರುಕು ಆಗತ್ತೆ. ಬಿರುಕೇ ಆಗಿಲ್ಲ ಅನ್ನೋದು ಅಸತ್ಯ. ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗ ಸಣ್ಣಪುಟ್ಟ ಬಿರುಕು ಮುಂದಿನ ದಿನಗಳಲ್ಲಿ ಬಹಳ ಮುಖ್ಯವಾಗುತ್ತದೆ. ಅಪಾಯ ಪ್ರಮಾಣ ಪತ್ರ ನಾವು ಬೀಡಲು ಸಾಧ್ಯವಿಲ್ಲ ಅಂತಾ ಅಧಿಕಾರಿಗಳು ಹೇಳುತ್ತಾರೆ. ಜಾರ್ಖಂಡ್ ತಂಡ ಟ್ರಯಲ್ ಬ್ಲಾಸ್ಟ್ ಪರೀಕ್ಷೆ ಆಗೋ ವರೆಗೆ ನಾವು ಕಾಯಬೇಕು. ಮೈಸೂರು ಅರಸರು ಹಣವಿಲ್ಲದ ಸಮಯದಲ್ಲಿ ಕಟ್ಟಿದ್ದಾರೆ. ಇವತ್ತು ಅಪಾಯವಿಲ್ಲ ಎಂದರೂ ಮುಂದಿನದಿನ ಇರೋದಿಲ್ವಾ? ಅದನ್ನು ಕಾಪಾಡಿಕೊಳ್ಳಬೇಕು ಅಂತಾ ಹೇಳೋದು ತಪ್ಪಾ? ನಾನು ಕಾಳಜಿ ವಹಿಸೋದೇ ತಪ್ಪಾ. ಗಣಿಗಾರಿಕೆ ಟ್ರಯಲ್ ಬ್ಲಾಸ್ಟ್ ಪರೀಕ್ಷೆ ನಡೆಯುವವರೆಗೂ ನಿಲ್ಲಿಸಬೇಕು. ನಾನು ಸಂಬಂಧ ಪಟ್ಟ ಸಚಿವರ ಜತೆ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ:ವಿಧಾನಸೌಧಕ್ಕೆ ಇರುವ ಸೇಫ್ಟಿ KRSಗೆ ಇಲ್ಲ: ಸುಮಲತಾ ಆತಂಕ
ಪಾರ್ಟಿ ನಿಷೇಧಿಸಿ: ಗಣಿಗಾರಿಕೆ ಸಂಪೂರ್ಣ ವಾಗಿ ನಿಷೇಧಿಸಿ ಅಂತಾ ನಾನು ಹೇಳೋದಿಲ್ಲ. ಅದರೆ ಅಣೆಕಟ್ಟೆಗೆ ಯಾವುದೇ ಧಕ್ಕೆಯಾಗಬಾರದು. ಅದಕ್ಕೆ ಸಂಬಂಧಿಸಿದ ಕ್ರಮ ಕೈಗೊಳ್ಳಬೇಕು. ಭದ್ರತಾ ಲೋಪದ ಗಮನಹರಿಸಬೇಕಿದೆ. ಪೊಲೀಸ್ ಇಲಾಖೆ, ನೀರಾವರಿ ನಿಗಮ, ಗಣಿ ಇಲಾಖೆ ಡ್ಯಾಂ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳವೇಕು. ಅಧಿಕಾರಿಗಳಾಗಲಿ ಎಂಪಿ ಆಗಲಿ, ಎಂಎಲ್‍ಎ ಆಗಲಿ ಯಾಕೆ ಪಾರ್ಟಿ ನಡೆಸಬೇಕು.? ಅವರಿಗೂ ಕ್ರಮ ಕೈಗೊಳ್ಳಬೇಕು. ಕಾವೇರಿ ಹಿನ್ನಿರಿನಲ್ಲಿ ಪಾರ್ಟಿ ಮಾಡಬಾರದು. ಇದನ್ನು ತಡೆಯುವ ಜವಾಬ್ದಾರಿ ಯಾರದ್ದೂ ಅನ್ನೋದೇ ಪ್ರಶ್ನೆ. ಹಾಗಾಗಿ ಇಲ್ಲಿ ಎಲ್ಲಾ ಇಲಾಖೆಗಳ ಜವಾಬ್ದಾರಿಯೂ ಇದೆ. ನನ್ನ ಬಳಿ ಇದ್ದ ತಾಂತ್ರಿಕ ಆಧಾರದ ಮೇಲೆ ನಾನು ಹೇಳಿಕೆ ನೀಡಿದ್ದೆ. ಜೊತೆಗೆ ಕೆಲವರ ಸಲಹೆ ಹಿನ್ನೆಲೆಯಲ್ಲಿ ಅಣೆಕಟ್ಟೆ ಸುರಕ್ಷತೆಯ ಆತಂಕ ವ್ಯಕ್ತಪಡಿಸಿದ್ದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆಗೂ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಗೆ ತಂದಿದ್ದಕ್ಕೂ ಏನು ಸಂಬಂಧ: ಸುಮಲತಾ
ಮುಂದೆ ದೊಡ್ಡ ಹೋರಾಟ: ಈ ಬಗ್ಗೆ ನನ್ನದು ಒಂಟಿ ಧ್ವನಿ ಅಲ್ಲ. ಜವಾಬ್ದಾರಿ ಇರುವ ಎಲ್ಲಾರೂ ನನ್ನ ಜೊತೆ ಇರುತ್ತಾರೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಹೋರಾಟವಾಗಲಿದೆ. ಕೆಆರ್‍ಎಸ್‍ಗಿಂತ ದೊಡ್ಡದು ಗಣಿಗಾರಿಕೆಯಲ್ಲ. ತಾಂತ್ರಿಕ ಟೀಂ ಟ್ರಯಲ್ ಬ್ಲಸ್ಟ್ ಪರೀಕ್ಷೆ ನಡೆಸಲಿದೆ. ರೈತರು ಕೂಡ ಪರೀಕ್ಷೆ ನಡೆಸುವವರೆಗೆ ತಾಳ್ಮೆ ಇಟ್ಟುಕೊಳ್ಳಬೇಕು. ಮೊದಲು ಜಾರ್ಖಾಂಡ್ ಟೀಂ ಬ್ಲಾಸ್ಟ್ ಪರೀಕ್ಷೆ ನಡೆಸಲಿ ನೋಡೋಣ. ನಾನು ಬಿರುಕಿನ ಬಗ್ಗೆ ಹೇಳಿದ ಮೇಲೆಯೇ ವಿವಾದ ಆಗಿದ್ದು. ನಾನು ಸುಮ್ಮನೆ ಇರಬಹುದಾಗಿತ್ತು ಆಲ್ವಾ? ನಾನೇ ಎಲ್ಲಾ ಸಾಧಿಸಬೇಕು ಅಂತಾ ಹೇಳುತ್ತಿಲ್ಲ. ನನ್ನ ಧ್ವನಿ ಇಲ್ಲಿಗೆ ಕೊನೆಯಾಗುವುದಿಲ್ಲ. ಮುಂದಿನ ದಿನಗಳಲ್ಲೂ ಹೋರಾಟ ನಡೆಯಲಿದೆ. ಬಿರುಕು ಬಿಟ್ಟಿದೆ ಎಂದು ಹೇಳಿದಕ್ಕೆ ಈಗ ದುರಸ್ತಿ ಕೆಲಸ ಮಾಡುತ್ತಿದ್ದಾರೆ. ಶಾಸಕರ ನಟೋರಿಯಸ್ ಅನ್ನೋ ಪದ ಹಾಸ್ಯಾಸ್ಪದ ಪದ. ಈ ಬಗ್ಗೆ ಇನ್ನೂ ಅತಂಕ ದೂರವಾಗಿಲ್ಲ. ನನ್ನ ಆತಂಕ ಇನ್ನೂ ಹಾಗೆ ಇದೆ. ನನ್ನ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸಿಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.