ಮಂಡ್ಯ: ಕೆಆರ್‌ಎಸ್‌ನ ಸ್ಥಳೀಯರು, ಪ್ರವಾಸಿಗರು ಹಾಗೂ ಅಧಿಕಾರಿಗಳ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದು, ಸ್ಥಳೀಯರ ಆತಂಕ ದೂರವಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಯ ಮುಖ್ಯದ್ವಾರದಲ್ಲಿ ಹಾಗೂ ಬೃಂದಾವನ ಗಾರ್ಡನ್‍ನಲ್ಲಿ ಕಳೆದ ಹಲವು ದಿನಗಳಿಂದ ಚಿರತೆಯೊಂದು ಪದೇ ಪದೇ ಕಾಣಿಸಿಕೊಂಡಿತ್ತು.
Advertisement
Advertisement
ಕಳೆದ ಶುಕ್ರವಾರ ಚಿರತೆ ಓಡಾಡುವ ದೃಶ್ಯ ಇಲ್ಲಿನ ಸಿಸಿ ಟಿವಿಯಲ್ಲಿ ಸಹ ಸೆರೆಯಾಗಿತ್ತು. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯ ಸೆರೆಗೆ ಕೆಆರ್‌ಎಸ್ ಅಣೆಕಟ್ಟೆನ ಮುಖ್ಯದ್ವಾರದ ಬಳಿ ಬೋನ್ ಇರಿಸಿದ್ದರು.
Advertisement
Advertisement
ಬೋನ್ ಇರಿಸಿದ ಐದು ದಿನಗಳ ಬಳಿಕ ಇಂದು ಚಿರತೆ ಬೋನ್‍ಗೆ ಬಿದ್ದಿದೆ. ಚಿರತೆ ಬೋನ್‍ಗೆ ಬಿದ್ದಿರುವುದರಿಂದ ಜನರಲ್ಲಿ ಇದ್ದ ಆತಂಕ ದೂರವಾಗಿದೆ. ಸದ್ಯ ಬೋನಿಗೆ ಬಿದ್ದ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಡಲು ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ.