– ಬೇಬಿ ಬೆಟ್ಟದ ಮೇಲೆ ಇಸ್ರೋ ಕಣ್ಗಾವಲು
ಮಂಡ್ಯ: ಕೆಆರ್‌ಎಸ್ ಡ್ಯಾಂಗೆ ಕಲ್ಲುಗಣಿಯಿಂದ ಅಪಾಯವಿದ್ದು ಅಣೆಕಟ್ಟು ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಗಣಿಗಾರಿಕೆ ನಿರ್ಬಂಧಿಸುವಂತೆ ಆಗ್ರಹ ನಿರಂತರವಾಗಿ ಕೇಳಿಬರುತ್ತಿದೆ. ಈಗಾಗಲೇ ಡ್ಯಾಂ ವ್ಯಾಪ್ತಿಯ ಗಣಿಗಾರಿಕೆಗೆ ತಾತ್ಕಾಲಿಕ ನಿಷೇಧವನ್ನು ಹೇರಲಾಗಿದೆ. ಆದರೆ ಗಣಿಧಣಿಗಳು ನಿಷೇಧವನ್ನು ಲೆಕ್ಕಿಸದೇ ರಾತ್ರೋರಾತ್ರಿ ಅಕ್ರಮ ಗಣಿಗಾರಿಕೆ ಮಾಡ್ತಿದ್ದು, ಸ್ಥಳೀಯರು ಪದೇ ಪದೇ ದೂರುತ್ತಿದ್ದಾರೆ. ಇದರಿಂದ ಗಣಿಗಾರಿಕೆಗೆ ಬ್ರೇಕ್ ಹಾಕಲು ಮಂಡ್ಯ ಜಿಲ್ಲಾಡಳಿತ ಹೊಸ ಪ್ಲಾನ್ ಮಾಡಿದ್ದು ಬೇಬಿ ಬೆಟ್ಟವನ್ನ ಇಸ್ರೋ ಕಣ್ಗಾವಲಿನಲ್ಲಿಡಲು ನಿರ್ಧರಿಸಿದೆ.
Advertisement
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂಗೆ ಗಣಿಗಾರಿಕೆಯಿಂದ ಅಪಾಯವಿದೆ ಎಂಬ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಿದೆ. ಡ್ಯಾಂ ವ್ಯಾಪ್ತಿಯ ಪಾಂಡವಪುರ ತಾಲೂಕಿನ ಬೇಬಿಬೆಟ್ಟದಲ್ಲಿ ಗಣಿಗಾರಿಕೆಯನ್ನ ಸಂಪೂರ್ಣ ನಿಷೇಧಿಸುವಂತೆ ಹೋರಾಟಗಳು ನಡೆಯುತ್ತಿವೆ. ಸದ್ಯ ತಾತ್ಕಾಲಿಕ ನಿಷೇಧಾಜ್ಞೆ ನಡುವೆಯೂ ಬೇಬಿಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳು ಗಣಿಧಣಿಗಳೊಂದಿಗೆ ಶಾಮೀಲಾಗಿ ರಾತ್ರೋ ರಾತ್ರಿ ಅಕ್ರಮ ಗಣಿಚಟುವಟಿಕೆಗೆ ಅವಕಾಶ ನೀಡಿದ್ದಾರೆಂದು ಸ್ಥಳೀಯ ಆರೋಪಿಸಿದ್ದಾರೆ.
Advertisement
Advertisement
ಪದೇ ಪದೇ ಸ್ಥಳೀಯರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಗಣಿಗಾರಿಕೆ ಮೇಲೆ ನಿಗಾವಹಿಸಲು ಮಂಡ್ಯ ಜಿಲ್ಲಾಡಳಿತ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ. ಇಸ್ರೋ ಮ್ಯಾಪಿಂಗ್ ಮೂಲಕ ಗಣಿಗಾರಿಕೆ ಪ್ರಮಾಣವನ್ನ ಜಿಲ್ಲಾಡಳಿತ ಪತ್ತೆಹಚ್ಚಲಿದ್ದು ಅಕ್ರಮಗಳಿಗೆ ಕಡಿವಾಣ ಹಾಕಲಿದ್ದಾರೆ. ಇಸ್ರೋ ಮ್ಯಾಪಿಂಗ್ ಎಂಬುದು ಉಪಗ್ರಹ ಚಿತ್ರ ತಂತ್ರಜ್ಞಾನವಾಗಿದ್ದು. ಕಲ್ಲಿನ ಸ್ವರೂಪ, ಪ್ರಾಕೃತಿಕ ಬದಲಾವಣೆ, ಹವಾಮಾನ, ಕಲ್ಲುಗಣಿಗಾರಿಕೆ, ಅರಣ್ಯ ಪ್ರದೇಶ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚಿತ್ರ ಸಹಿತ ಮಾಹಿತಿ ಕಲೆಹಾಕಲು ಸಹಕಾರಿಯಾಗಲಿದೆ.
Advertisement
ಡಿಸಿ ವೆಂಕಟೇಶ್ ನೇತೃತ್ವದಲ್ಲಿ ನಡೆದ ಗಣಿ ಇಲಾಖೆ, ಅರಣ್ಯ ಇಲಾಖೆಗಳ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಇಸ್ರೋ ಮ್ಯಾಪಿಂಗ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಅಧಿಕಾರಿಗಳನ್ನು ಜಿಲ್ಲಾಡಳಿತ ಸಂಪರ್ಕಿಸಿದ್ದು, ಅವರಿಂದ ಬೇಬಿಬೆಟ್ಟದ ಚಟುವಟಿಕೆಗಳ ಮಾಹಿತಿಯನ್ನ ಪ್ರತಿ ವಾರ ಚಿತ್ರಸಹಿತ ಪಡೆಯಬಹುದಾಗಿದೆ. ಇದರ ಜೊತೆಗೆ ಬೇಬಿಬೆಟ್ಟಕ್ಕೆ ಸಿಸಿ ಟಿವಿ ಅಳವಡಿಸಿ ಹೆಚ್ಚಿನ ಪೋಲೀಸ್ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.
ನಿಷೇಧಾಜ್ಞೆ ನಡುವೆಯೂ ನಡೆಯುತ್ತಿದ್ದ ಅಕ್ರಮ ಗಣಿಚಟುವಟಿಕೆಗೆ ಕಡಿವಾಣ ಹಾಕಲು ಇಸ್ರೋ ಮ್ಯಾಪಿಂಗ್ ಸಹಕಾರಿಯಾಗಲಿದ್ದು. ಹೊಸ ತಂತ್ರಜ್ಞಾನವನ್ನ ಅಧಿಕಾರಿಗಳು ಎಷ್ಟರಮಟ್ಟಿಗೆ ಬಳಕೆ ಮಾಡ್ತಾರೆ. ಈ ಮೂಲಕ ಕೆಆರ್‍ಎಸ್ ಡ್ಯಾಂನ್ನು ಎಷ್ಟರಮಟ್ಟಿಗೆ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎಂದು ಕಾದು ನೋಡಬೇಕಿದೆ.