ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಇಂದು 6,379 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ ಡ್ಯಾಂಗೆ 1,228 ಕ್ಯೂಸೆಕ್ ಒಳಹರಿವು ಬಂದಿತ್ತು. ಒಂದು ದಿನ ಅಂತರದಲ್ಲಿ 5,151 ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣದಿಂದ ಡ್ಯಾಂಗೆ ಈ ಪ್ರಮಾದ ಒಳಹರಿವು ಹರಿದು ಬರುತ್ತಿದೆ. ಇದನ್ನೂ ಓದಿ: ಭಾರೀ ಮಳೆ- ಕಬಿನಿ ಒಳ ಹರಿವು ಹೆಚ್ಚಳ
ಸದ್ಯ ಅಣೆಕಟ್ಟೆಯ ನೀರಿನ ಇಂದಿನ ಮಟ್ಟ 82.50 ಅಡಿ ಇದ್ದು, ಡ್ಯಾಂ ನ ಗರಿಷ್ಠ ಮಟ್ಟ 124.80 ಅಡಿ ಇದೆ. ಒಳಹರಿವು 6,379 ಕ್ಯೂಸೆಕ್ ಇದ್ದು ಹೊರಹರಿವು 361 ಕ್ಯೂಸೆಕ್ ಇದೆ. ಇನ್ನೂ ಸದ್ಯ ಡ್ಯಾಂನ ನೀರಿನ ಸಂಗ್ರಹ 12.146 ಟಿಎಂಸಿ ಇದ್ರೆ, ಗರಿಷ್ಟ ಸಂಗ್ರಹ 49.452 ಟಿಎಂಸಿಯಷ್ಟು ಇದೆ.