ಮಂಡ್ಯ: ಕೆಆರ್‌ಎಸ್ ಡ್ಯಾಂ ತುಂಬಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಐದನೇ ಬಾರಿಗೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.
ಭಾನುಪ್ರಕಾಶ್ ನೇತೃತ್ವದಲ್ಲಿ ಪೂಜೆ ನಡೆದಿದ್ದು, ಸಿಎಂ ಯಡಿಯೂರಪ್ಪ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿ ಸಂತೋಷ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಿಎಂ, ಐದನೇ ಬಾರಿಗೆ ಬಂದು ನಾನು ಕೆಆರ್‌ಎಸ್‌ಗೆ ಬಾಗಿನ ನೀಡಿದ್ದೇನೆ. ಇದು ನನ್ನ ಸೌಭಾಗ್ಯವಾಗಿದೆ. ಪ್ರತಿ ವರ್ಷವೂ ಇದೇ ರೀತಿ ಕಾವೇರಿ ತುಂಬಿ ಹರಿಯಲಿ. ಈ ನಾಡಿನ ರೈತರಿಗೆ ಅನುಕೂಲವಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ವಿಶೇಷ ಎಂದರೆ ಗೌರಿ-ಗಣೇಶ ಹಬ್ಬದಂದು ಬಾಗಿನ ನೀಡುವ ಸೌಭಾಗ್ಯ ನನಗೆ ಸಿಕ್ಕಿದೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿವೆ. ಈ ವರ್ಷ ರೈತ ಅತ್ಯಂತ ಸಂತೋಷದಿಂದ ಬೆಳೆ ಬೆಳೆಯಲು ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಶ್ರೀ @BSYBJP ರವರು ಇಂದು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಕೆ.ಆರ್.ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ @STSomashekarMLA, ಸಂಸತ್ ಸದಸ್ಯೆ @sumalathaA ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. pic.twitter.com/v4pwpN387Z
— CM of Karnataka (@CMofKarnataka) August 21, 2020
ವರುಣ ದೇವ ಪ್ರತಿ ವರ್ಷ ಇದೇ ರೀತಿ ಕೃಪೆ ತೋರಬೇಕು. ಇದರಿಂದ ಮಳೆ-ಬೆಳೆಯಾಗಿ ರೈತ ಸಂತಸದಿಂದ ಇರುತ್ತಾನೆ. ರೈತರ ಅನುಕೂಲಕ್ಕೆ ಸಾಕಷ್ಟು ಯೋಜನೆಯನ್ನು ಮಾಡಿದ್ದೇವೆ. ಮುಂದೆ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಮತ್ತಷ್ಟು ಮಾಡುತ್ತೇವೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ಇದರಿಂದ ರೈತರು ಒಳ್ಳೆಯ ಬೆಳೆ ಬೆಳೆಯಲಿದ್ದಾರೆ. ಅತಿವೃಷ್ಠಿಯಾದ ಕಡೆಗೆ ಸೂಕ್ತ ಪರಿಹಾರ ನೀಡುತ್ತೇನೆ ಎಂದು ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸದರು.
ರಾಜ್ಯದ ಜನತೆಯ ಪರವಾಗಿ, ಸಂಪ್ರದಾಯದಂತೆ ಜೀವನದಿ, ಜೀವನಾಡಿ ಕಾವೇರಿ ಮಾತೆಗೆ ಇಂದು ಪೂಜೆ ಸಲ್ಲಿಸಿ ನಂತರ ಕೃಷ್ಣರಾಜಸಾಗರ, ಕಬಿನಿ ಜಲಾಶಯಗಳಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಿದ್ದೇನೆ. ರಾಜ್ಯದಲ್ಲಿ ಜೀವಜಲ ಸದಾ ತುಂಬಿರಲಿ, ಮಳೆ ಬೆಳೆಗಳು ಸಮೃದ್ಧವಾಗಿರಲಿ, ನಾಡು ಹಸಿರಾಗಿದ್ದು, ರೈತರ ಬಾಳು ಸದಾ ಹಸನಾಗಿರಲಿ ಎನ್ನುವುದೇ ನಮ್ಮ ಪ್ರಾರ್ಥನೆ. pic.twitter.com/u8DjiNZTTP
— B.S.Yediyurappa (@BSYBJP) August 21, 2020
ಕೆಆರ್‌ಎಸ್‌ನ ಪುನಶ್ಚೇತನ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಇದು ಪ್ರಮುಖ ಪ್ರವಾಸಿ ತಾಣವಾಗಿದೆ. ಇದನ್ನು ವಿಶ್ವ ದರ್ಜೆಗೆ ಏರಿಸಲು ಕ್ರಮ ತೆಗೆದುಕೊಳ್ಳುತ್ತೇನೆ. ಡ್ಯಾಂನ ಸುರಕ್ಷತೆಗೆ ಗೇಟುಗಳ ಬದಲಾವಣೆ ಮಾಡಲಾಗಿದೆ. ನೀರಾವರಿಗೆ ಸರ್ಕಾರ ಬದ್ಧವಾಗಿದ್ದು, 74 ಸಾವಿರ ಕೋಟಿ ಯೋಜನೆಗೆ ಮಂಜೂರಾತಿ ನೀಡಿದ್ದೇವೆ ಎಂದರು.
ಇಂದು ಜೀವನದಿ, ರೈತರ ಜೀವನಾಡಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ತುಂಬಿರುವ ಕೆ.ಆರ್.ಎಸ್ ಜಲಾಶಯದಲ್ಲಿ ಬಾಗಿನ ಅರ್ಪಿಸಲಾಯಿತು.
ಜಿಲ್ಲಾ ಉಸ್ತುವಾರಿ ಹಾಗು ಸಹಕಾರ ಸಚಿವರು, ಮಂಡ್ಯ ಸಂಸತ್ ಸದಸ್ಯರು ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. pic.twitter.com/HbcH5Wsypa
— B.S.Yediyurappa (@BSYBJP) August 21, 2020