ಅಜಯ್ ರಾವ್ ನಟನೆಯ ವಿಜಯಾನಂದ್ ನಿರ್ದೇಶನದ ‘ಕೃಷ್ಣ ಟಾಕೀಸ್’ ಈ ಸಿನಿ ಶುಕ್ರವಾರ ತೆರೆಗೆ ಬರುತ್ತಿದೆ. ಹಾರಾರ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಸಿನಿಮಾ ಅಜಯ್ ರಾವ್ ಅವರಿಗೂ ತುಂಬಾ ಸ್ಪೆಷಲ್. ಮೊದಲ ಬಾರಿ ಹಾರಾರ್, ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾದಲ್ಲಿ ನಟಿಸುತ್ತಿರುವ ಅಜಯ್ ರಾವ್ ಸಿನಿಮಾಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲದಲ್ಲಿದ್ದಾರೆ. ಟ್ರೇಲರ್ ಹಾಗೂ ಹಾಡುಗಳಿಗೆ ಸಿನಿರಸಿಕರಿಂದ ಸಿಕ್ಕಿರುವ ರೆಸ್ಪಾನ್ಸ್ ಕಂಡು ಚಿತ್ರತಂಡ ಥ್ರಿಲ್ ಆಗಿದ್ದು ಸಿನಿಮಾ ಮೇಲೂ ಇದೇ ರೀತಿಯ ಪ್ರೀತಿ ಸಿಗುವ ಭರವಸೆಯಲ್ಲಿದೆ ಕೃಷ್ಣ ಟಾಕೀಸ್ ಚಿತ್ರತಂಡ.
Advertisement
‘ಕೃಷ್ಣ ಟಾಕೀಸ್’ ಸಿನಿಮಾದ ಪ್ರತಿ ಹಾಡುಗಳು ಹಿಟ್ ಆಗಿವೆ. ಕೇಳುಗ ಪ್ರಿಯರು ಹಾಡುಗಳಿಗೆ ಮನಸೋತಿದ್ದಾರೆ. ಈ ಹಿಟ್ ಹಾಡುಗಳ ಹಿಂದೆ ಇರುವ ಸಂಗೀತ ಸಂಯೋಜನೆ ಖ್ಯಾತ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಅವರದ್ದು. ಹಲವಾರು ಹಿಟ್ ಹಾಡುಗಳನ್ನು ನೀಡಿರುವ ಶ್ರೀಧರ್ ವಿ ಸಂಭ್ರಮ್ ‘ಕೃಷ್ಣ ಟಾಕೀಸ್’ ಸಿನಿಮಾದಲ್ಲಿಯೂ ಒಂದಕ್ಕಿಂತ ಒಂದು ವೆರೈಟಿ ಹಾಡುಗಳನ್ನು ನೀಡಿದ್ದಾರೆ. ‘ಕೃಷ್ಣ ಟಾಕೀಸ್’ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಅಜಯ್ ರಾವ್ ಹಾಗೂ ಶ್ರೀಧರ್ ವಿ ಸಂಭ್ರಮ್ ಜುಗಲ್ಬಂದಿ ಕೃಷ್ಣ ಸೀರೀಸ್ ಐದು ಸಿನಿಮಾಗಳಲ್ಲೂ ಮುಂದುವರಿದಂತಾಗಿದೆ. ಈ ಬಗ್ಗೆ ಮಾತನಾಡಿರುವ ಶ್ರೀಧರ್ ವಿ ಸಂಭ್ರಮ್, ‘ಅಜಯ್ ರಾವ್ ಅವರ ಕೃಷ್ಣ ಸೀರೀಸ್ ನಲ್ಲಿ ನಾನು ನಾಲ್ಕು ಸಿನಿಮಾಗಳಿಗೆ ಸಂಗೀತ ನೀಡಿದ್ದೇನೆ. ನಾಲ್ಕು ಸಿನಿಮಾ ಹಾಡುಗಳು ಹಿಟ್ ಆಗಿವೆ. ಇದೀಗ ಕೃಷ್ಣ ಸೀರೀಸ್ ಐದನೇ ಸಿನಿಮಾಕ್ಕೂ ಸಂಗೀತ ನೀಡಿದ್ದು ಈ ಸಿನಿಮಾ ಹಾಡುಗಳು ಕೂಡ ಹಿಟ್ ಲಿಸ್ಟ್ ಸೇರಿದ್ದು ಸಂತಸ ತಂದಿದೆ. ಅಜಯ್ ರಾವ್ ಹಾಗೂ ನನ್ನ ಜುಗಲ್ಬಂದಿ ಐದನೇ ಬಾರಿಯೂ ಮುಂದುವರೆದಿದ್ದು, ಒಂದೊಳ್ಳೆ ಅನುಭವವನ್ನು ‘ಕೃಷ್ಣ ಟಾಕೀಸ್’ ಸಿನಿಮಾ ನೀಡಿದೆ’ ಎಂದಿದ್ದಾರೆ.
Advertisement
Advertisement
ಏಪ್ರಿಲ್ 16ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ‘ಕೃಷ್ಣ ಟಾಕೀಸ್’ ಸಿನಿಮಾ ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫೀಕೇಟ್ ಪಡೆದುಕೊಂಡಿದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ನಿರ್ದೇಶಕ ವಿಜಯಾನಂದ್ ಸಿನಿಮಾ ಕಥೆ ಹೆಣೆದಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಹಾರಾರ್ ಎಲಿಮೆಂಟ್ ಇರುವ ಕೃಷ್ಣ ಟಾಕೀಸ್ ನಲ್ಲಿ ಪತ್ರಕರ್ತನಾಗಿ ಅಜಯ್ ರಾವ್ ಬಣ್ಣ ಹಚ್ಚಿದ್ದಾರೆ. ಗೋಕುಲ್ ಎಂಟರ್ ಟೈನ್ಮೆಂಟ್ ಬ್ಯಾನರ್‍ನಲ್ಲಿ ಗೋವಿಂದರಾಜು ಎ.ಹೆಚ್ ಆಲೂರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅಪೂರ್ವ ನಾಯಕಿಯಾಗಿ ನಟಿಸಿದ್ದು, ನಟಿ ಸಿಂಧೂ ಲೋಕನಾಥ್ ವಿಶೇಷ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಸಿಗಲಿದ್ದಾರೆ. ಚಿಕ್ಕಣ್ಣ, ಶೋಭರಾಜ್, ಪ್ರಮೋದ್ ಶೆಟ್ಟಿ, ಮಂಡ್ಯ ರಮೇಶ್, ನಿರಂತ್, ಪ್ರಕಾಶ್ ತುಮಿನಾಡು ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರ್ಕಕೆ ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣವಿದೆ.
Advertisement