ಹಾಸನ, ಚಿಕ್ಕೋಡಿ: ಮಳೆ ಆರ್ಭಟ ಮುಂದುವರೆದಿದ್ದು, ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ನಿನ್ನೆಗಿಂತ ಎರಡು ಅಡಿಗಳಷ್ಟು ಹೆಚ್ಚಳವಾಗಿದೆ. ಹಾಸನದಲ್ಲಿ ಮನೆ ಕುಸಿದಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದನ್ನೂ ಓದಿ: ಫ್ರೀ ವ್ಯಾಕ್ಸಿನ್ ನೀಡ್ತಿರೋದು ನಾನು, ನನ್ನ ಫೋಟೋ ಹಾಕಬೇಕು ಅಲ್ವಾ?- ಜಮೀರ್
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ನಿನ್ನೆಗಿಂತ ಎರಡು ಅಡಿಗಳಷ್ಟು ಹೆಚ್ಚಳವಾಗಿದೆ. ಇನ್ನೂ ವೇದಗಂಗಾ, ದೂದಗಂಗಾ, ಹೀರಣ್ಯಕೇಶಿ ನದಿ ನೀರಿನ ಪ್ರಮಾಣದಲ್ಲೂ ಏರಿಕೆಯಾಗಿದೆ. ಚಿಕ್ಕೋಡಿ ವ್ಯಾಪ್ತಿಯ 7 ಸೇತುವೆಗಳ ಜಲಾವೃತ ಯಥಾಸ್ಥಿತಿಯಲ್ಲಿವೆ. ದೂದಗಂಗಾ ಹಾಗೂ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭೋಜ-ಕಾರದಗಾ, ದತ್ತವಾಡ- ಮಲಿಕವಾಡ, ಅಕ್ಕೋಳ- ಸಿದ್ನಾಳ, ಜತ್ರಾಟ – ಭೀವಶಿ, ಭೋಜವಾಡಿ – ಕುನ್ನೂರು, ಹೀರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾಗನೂರುಬ- ಗೋಟೂರ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ – ಯಡೂರು ಸೇತುವೆಗಳು ಮುಳಗಡೆಯಾಗಿವೆ. ಇದನ್ನೂ ಓದಿ: ವಿಶ್ವ ನಾಯಕರ ಪೈಕಿ ಶೇ.66 ಅಂಕದೊಂದಿಗೆ ಮೋದಿ ನಂಬರ್ 1
ಚಿಕ್ಕೋಡಿ ವ್ಯಾಪ್ತಿಯಲ್ಲಿ 7 ಕೆಳ ಹಂತದ 14 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು ಮುಳುಗಡೆಯಾಗಿವೆ. ಕೃಷ್ಣಾ ನದಿ ತೀರದಲ್ಲಿರುವ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಜಲಾವೃತವಾಗಿದ್ದು ನದಿ ನೀರಿನಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇದನ್ನೂ ಓದಿ: ನುರಿತ ಈಜುಗಾರರಿಗಾಗಿ ಕಲಬುರಗಿ ಜಿಲ್ಲಾಡಳಿತದಿಂದ ಹುಡುಕಾಟ
ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಸಕಲೇಶಪುರ-ಆಲೂರು ತಾಲ್ಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು ಸಕಲೇಶಪುರ ತಾಲ್ಲೂಕಿನ ಹಲವೆಡೆ ಹಾನಿಯುಂಟಾಗಿದೆ. ಧಾರಾಕಾರ ಮಳೆಗೆ ಹಾನುಬಾಳು ಸಮೀಪದ ಬೆಣಗಿನ ಹಳ್ಳ ಸೇತುವೆ ಕೊಚ್ಚಿ ಹೋಗಿದೆ. ಕಳೆದ ವರ್ಷವೂ ಮಳೆಗೆ ಸೇತುವೆ ಕೊಚ್ಚಿಹೋಗಿತ್ತು. ನಂತರ ಗ್ರಾಮಸ್ಥರೇ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಿಕೊಂಡಿದ್ದರು. ಹಾನುಬಾಳು ಸರ್ಕಲ್‍ನಲ್ಲಿರುವ ಹಳೆಯ ಕಟ್ಟಡವೊಂದು ಬೀಳುವ ಹಂತದಲ್ಲಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಬಿಳಿಸಾರೆ, ದೇವಾಲದಕೆರೆ, ಕಾಡಮನೆ, ಮಾರನಹಳ್ಳಿ ಸುತ್ತಮುತ್ತ ಭಾರಿ ಮಳೆಗೆ ಬೆಳೆ ಹಾನಿ ಭತ್ತದ ಗದ್ದೆಗಳಲ್ಲಿ ನೀರು ತುಂಬಿದೆ. ಸಕಲೇಶಪುರ ಪಟ್ಟಣದ ಪ್ರೇಮನಗರದಲ್ಲಿ ಭೂಕುಸಿತ ಉಂಟಾಗಿದ್ದು, ರಸ್ತೆಯ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಆತಂಕ ಮನೆ ಮಾಡಿದೆ. ನಿರಂತರ ಮಳೆಗೆ ಕಾಡುಮನೆಯಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರಿ ಮಳೆ ಗಾಳಿಗೆ ಮರಗಳು ಉರುಳಿ ಬಿದ್ದಿದ್ದು, ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯ ಜೀವನದಿ ಹೇಮಾವತಿಗೆ 15364 ಕ್ಯೂಸೆಕ್ ಒಳಹರಿವಿದೆ. ಹಾಸನ ನಗರದಲ್ಲಿ ವರುಣ ಕೊಂಚ ಬಿಡುವು ನೀಡಿದ್ದು ಬಹುತೇಕ ಕಡೆ ಮೋಡ ಕವಿದ ವಾತಾವರಣವಿದೆ.