ನವದೆಹಲಿ: ಕೇಂದ್ರ ಸರ್ಕಾರ ಇಂದು ಮಂಡಿಸಿದ ಬಜೆಟ್‌ನಲ್ಲಿ ಕೆಲ ಉತ್ಪನ್ನಗಳ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ವಿಧಿಸಿದ ವಿಚಾರ ಬಹಳ ಚರ್ಚೆ ಆಗುತ್ತಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೃಷಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇಲೆ ಸೆಸ್ ವಿಧಿಸಿದ್ದಾರೆ. ಡೀಸೆಲ್ ಮೇಲೆ 4 ರೂ. ಮತ್ತು ಪೆಟ್ರೋಲ್ ಮೇಲೆ 2.5 ರೂ. ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ವಿಧಿಸಿದ್ದಾರೆ.
Advertisement
Advertisement
ಕೃಷಿ ಕಾಯ್ದೆಗಳನ್ನು ಖಂಡಿಸಿ ರೈತರು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿಯೇ ಕೃಷಿ ಹೆಸರಿನಲ್ಲಿ ಸೆಸ್ ವಿಧಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
Advertisement
ಚರ್ಚೆಯ ಬೆನ್ನಲ್ಲೇ ಈಗಾಗಲೇ ದುಬಾರಿ ಆಗುತ್ತಿರುವ ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ದುಬಾರಿ ಆಗಲಿದೆ ಎಂದು ವಿಪಕ್ಷಗಳು ಬಜೆಟ್ ಅನ್ನು ಟೀಕಿಸಿತ್ತು. ಈ ವೇಳೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ, ಕೃಷಿ ಸೆಸ್ ವಿಧಿಸಲಾಗಿದೆ ನಿಜ. ಆದರೆ ಇದು ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಎಂದು ಸ್ಪಷ್ಟಪಡಿಸಿತು.
Advertisement
ಯಾವುದರ ಮೇಲೆ ಎಷ್ಟು ಕೃಷಿ ಸೆಸ್?
ಪೆಟ್ರೋಲ್ – 2.50 ರೂ.
ಡೀಸೆಲ್ – 4 ರೂ.
ಚಿನ್ನ, ಬೆಳ್ಳಿ – 2.5%
ಮದ್ಯ – 100%
ಕಚ್ಚಾ ತಾಳೆ ಎಣ್ಣೆ -17.5%
ಕಚ್ಚಾ ಸೋಯಾ, ಸೂರ್ಯಕಾಂತಿ ಎಣ್ಣೆ – 20%
ಸೇಬು – 35%
ಕಲ್ಲಿದ್ದಲು, ಲಿಗ್ನೈಟ್ – 1.5%
ರಸಗೊಬ್ಬರ – 5%
ಬಟಾಣಿ – 40%
ಕಾಬೂಲ್ ಕಡಲೆ – 30%
ಬೆಂಗಾಲ್ ಕಡಲೆಬೇಳೆ- 50%
ಬೇಳೆಕಾಳು – 20%
ಹತ್ತಿ – 5%
ದುಬಾರಿಯಾಗಲ್ಲ ಯಾಕೆ?
ತೈಲ, ಬಂಗಾರದ ವಿಚಾರದಲ್ಲಿ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ವಾಪಸ್ ಪಡೆಯಲಾಗಿದೆ. ಹೀಗಾಗಿ ಕೃಷಿ ಸೆಸ್ ವಿಧಿಸಿದರೂ ತೈಲ ಗ್ರಾಹಕರ ಮೇಲೆ ಹೊರೆ ಇಲ್ಲ. ತೈಲದ ಮೇಲಿನ ಮೂಲ ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಇಳಿಕೆಯಾಗಿದೆ.
ಪೆಟ್ರೋಲ್ ಮೇಲಿನ ಮೂಲ ಅಬಕಾರಿ ಸುಂಕ 2.98 ರೂ. ರಿಂದ 1.4 ರೂಗೆ ಇಳಿಕೆಯಾಗಿದ್ದರೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ 12 ರೂ.ಗಳಿಂದ 11 ರೂ.ಗಳಿಗೆ ಕಡಿತವಾಗಿದೆ.
ಡೀಸೆಲ್ ಮೇಲಿನ ಮೂಲ ಅಬಕಾರಿ ಸುಂಕ 4.83 ರೂ. ನಿಂದ 1.8 ರೂ.ಗೆ ಇಳಿಕೆಯಾಗಿದ್ದರೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ 9 ರೂ.ಗಳಿಂದ 8 ರೂ.ಗಳಿಗೆ ಕಡಿತವಾಗಿದೆ.
ಚಿನ್ನ, ಬೆಳ್ಳಿ ಮೇಲೆ ಕೃಷಿ ಸೆಸ್ ವಿಧಿಸಿದ್ದರೂ, ಮತ್ತೊಂದು ಕಡೆ ಅಬಕಾರಿ ಸುಂಕ ಇಳಿಕೆ ಮಾಡಲಾಗಿದೆ. ಶೇ.100ರಷ್ಟು ಕೃಷಿ ಸೆಸ್ ವಿಧಿಸಿದ್ದರೂ ಮದ್ಯ ಕೂಡ ದುಬಾರಿ ಆಗುವುದಿಲ್ಲ. ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ.150ರಿಂದ ಶೇ.50ಕ್ಕೆ ಇಳಿಕೆ ಮಾಡಲಾಗಿದೆ. ಚಿನ್ನ ಬೆಳ್ಳಿ ಮೇಲಿದ್ದ ಅಬಕಾರಿ ಸುಂಕವನ್ನು ಶೇ.12.5ರಿಂದ ಶೇ.7.5ಕ್ಕೆ ಇಳಿಸಲಾಗಿದೆ. ಇದರಿಂದಾಗಿ 1 ಗ್ರಾಮ್‍ಗೆ 125 ರೂ. ದರ ಇಳಿಕೆಯಾಗುವ ಸಾಧ್ಯತೆಯಿದೆ.