ಕೃಷಿ ಕಾನೂನು ವಿರೋಧಿಸಿ ಸಂಸತ್‍ಗೆ ಟ್ರ್ಯಾಕ್ಟರ್ ಏರಿ ಬಂದ ರಾಹುಲ್ ಗಾಂಧಿ

Public TV
1 Min Read
Rahul Gandhi

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನು ವಿರೋಧಿಸಿ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಟ್ರ್ಯಾಕ್ಟರ್ ನಲ್ಲಿ ಸಂಸತ್ ಭವನಕ್ಕೆ ಬರುವ ಮೂಲಕ ಪ್ರತಿಭಟನೆ ನಡೆಸಿದರು. ಇದೇ ಟ್ರ್ಯಾಕ್ಟರ್ ನಲ್ಲಿಯೇ ರಣ್‍ದೀಪ್ ಸುರ್ಜೇವಾಲಾ, ದೀಪೇಂದ್ರ ಹುಡ್ಡಾ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಆಗಮಿಸಿದರು.

Rahul Gandhi 1

ಕೇಂದ್ರ ಸರ್ಕಾರ ರೈತರ ಸಮಸ್ಯೆಯನ್ನು ಆಲಿಸುತ್ತಿಲ್ಲ. ಕೂಡಲೇ ನೂತನ ಕೃಷಿ ಕಾನೂನುಗಳನ್ನು ಹಿಂಪಡೆದುಕೊಳ್ಳಬೇಕು. ಈ ಕಾನೂನುಗಳು ರೈತರನ್ನು ಕತ್ತಲೆಗೆ ತಳ್ಳಲಿವೆ. ಈ ಸರ್ಕಾರ ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಅವಮಾನನಿಸಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಯುಪಿಯಲ್ಲಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಇಲ್ಲ: ಓವೈಸಿ

ಅಧಿವೇಶನ ಆರಂಭ ಹಿನ್ನೆಲೆ ದೆಹಲಿಯ ಜಂತರ್-ಮಂತರ್ ಬಳಿಯಲ್ಲಿ ಪ್ರತಿನಿತ್ಯ 200 ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಂತರ್ ಮಂತರ್ ನಲ್ಲಿ ಅಧಿವೇಶನ ಮುಗಿಯವರೆಗೂ ಪ್ರತಿಭಟನೆ ನಡೆಸಲು ರೈತರು ತೀರ್ಮಾನಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕೃಷಿ ಕಾನೂನು ವಿರೋಧಿಸಿ ರಾಜಧಾನಿ ದೆಹಲಿಯ ಗಡಿ ಭಾಗಗಳಾದ ಸಿಂಘು, ಟಿಕ್ರಿ, ಗಾಜೀಪುರದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

Share This Article