ಕೋಲಾರ: ಪ್ರಧಾನಿ ಮೋದಿ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಎಪಿಎಂಸಿ ತಿದ್ದುಪಡಿ ತಂದ ಬಳಿಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯೇ ಬುಡಮೇಲಾಗಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ವ್ಯವಹಾರ ನಡೀತಿದೆ. ಆದರೆ ಹೊಸ ಕಾನೂನಿನಿಂದ ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ ಎಪಿಎಂಸಿಗಳು ಖಾಲಿ ಹೊಡೆಯುತ್ತಿವೆ. ಹೊಸ ಕಾನೂನಿನಿಂದ ಎಪಿಎಂಸಿಗಳ ಆದಾಯ ಬಹುತೇಕ ನಿಂತು ಹೋಗಿದೆ. ಹೀಗಾಗಿ ಎಪಿಎಂಸಿಗಳ ನಿರ್ವಹಣೆ ಕಷ್ಟ ಆಗುತ್ತಿದೆ.
Advertisement
ಹೊಸ ಕಾಯ್ದೆಯಿಂದಾಗಿ ಎಪಿಎಂಸಿಗಳ ಆದಾಯ ಶೇ.75 ರಷ್ಟು ಕುಸಿತ ಕಾಣುತ್ತಿದೆ. ಪರಿಣಾಮ ಎಪಿಎಂಸಿಗಳು ತಮ್ಮ ವ್ಯವಸ್ಥೆಯನ್ನು ನಿರ್ವಹಣೆ ಮಾಡುವುದು ಕಷ್ಟಕರವಾದ ವಾತಾವರಣ ನಿರ್ಮಾಣವಾಗಿದೆ. ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಹೊರತು ಪಡಿಸಿ, ಮಾಲೂರು, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ಮಾರುಕಟ್ಟೆಗಳ ಆದಾಯ ತೀವ್ರ ಕುಸಿತ ಕಂಡಿದೆ. ಪರಿಣಾಮ ಎಪಿಎಂಸಿ ಗಳಲ್ಲಿ ಸಿಬ್ಬಂದಿ ಕಡಿತ, ನಿರ್ವಹಣೆ ಕಡಿತ ಮಾಡುವ ಪರಿಸ್ಥಿತಿ ಎದುರಾಗಿದೆ. ಇದು ಹೊಸ ಕಾಯ್ದೆ ಜಾರಿಗೆ ತಂದ ಮೂರೇ ತಿಂಗಳಲ್ಲಿ ಮಾರುಕಟ್ಟೆಗಳ ನಿರ್ವಹಣೆ ಮಾಡಲು ಹಣವಿಲ್ಲದೆ ಎಪಿಎಂಸಿಗಳು ಸಂಕಷ್ಟಕ್ಕೆ ಸಿಲುಕಿವೆ.
Advertisement
Advertisement
ಹೊಸ ಕಾಯ್ದೆ ಜಾರಿಗೆ ಬಂದ ನಂತರ ಎಪಿಎಂಸಿಗಳ ಆದಾಯದಲ್ಲಾಗಿರುವ ಗಣನೀಯ ಬದಲಾವಣೆಯನ್ನು ನೋಡುವುದಾದರೆ, ಕೋಲಾರ ಎಪಿಎಂಸಿ ಯಲ್ಲಿ ಟೊಮ್ಯಾಟೋ ಹಾಗೂ ತರಕಾರಿ ವಹಿವಾಟು ನಡೆಯುತ್ತಿರುವ ಹಿನ್ನೆಲೆ ಅಷ್ಟೇನು ಬದಲಾವಣೆ ಇಲ್ಲಾ. ಆದರೆ ತರಕಾರಿ ವಹಿವಾಟು ಇಲ್ಲದ ಮಾಲೂರು, ಮುಳಬಾಗಿಲು ಮತ್ತು ಬಂಗಾರಪೇಟೆ ಎಪಿಎಂಸಿಗಳಲ್ಲಿ ಆದಾಯ ಕುಸಿದಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಎಪಿಎಂಸಿಗಳಲ್ಲಿ ಆದಾಯ ಹಾಗೂ ಹೊಸ ಕಾಯ್ದೆ ಜಾರಿಗೆ ತಂದ ನಂತರ ವಸೂಲಾಗಿರುವ ಆದಾಯ ನೋಡುವುದಾದರೆ, ಬಂಗಾಪೇಟೆಯ ಎಪಿಎಂಪಿಯಲ್ಲಿ ಜನವರಿ-16,12,863, ಫೆಬ್ರವರಿ-16,61,447, ಆಗಸ್ಟ್-5,37,946, ಸೆಪ್ಟಂಬರ್-3,25,107. ಮಾಲೂರು ಎಪಿಎಂಪಿಯಲ್ಲಿ ಜನವರಿ-26,555, ಫೆಬ್ರವರಿ-6,03,249, ಆಗಸ್ಟ್-15,306, ಸೆಪ್ಟೆಂಬರ್-2,694. ಮಳಬಾಗಿಲು ಎಪಿಎಂಸಿಯಲ್ಲಿ ಜನವರಿ-2,57,396, ಫೆಬ್ರವರಿ-4,59,708, ಆಗಸ್ಟ್-64,540, ಸೆಪ್ಟೆಂವರ್-99,312 ರಷ್ಟಿದೆ.
Advertisement
ಹೊಸ ಕಾಯ್ದೆ ಇನ್ನೂ ಸರಿಯಾಗಿ ಅನುಷ್ಠಾನವಾಗುವ ಮೊದಲೇ ಈ ರೀತಿ ವ್ಯವಸ್ಥಿತವಾಗಿ ಕೆಲಸ ಮಾಡಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಸಿಬ್ಬಂದಿ ಕಡಿತ, ನಿರ್ವಹಣೆ ವೆಚ್ಚದಲ್ಲಿ ಕಡಿತ ಮಾಡಿಕೊಳ್ಳುವ ಹಂತ ತಲುಪಿದೆ. ಇನ್ನು ಹೊಸ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ಬಂದಲ್ಲಿ ಎಪಿಎಂಸಿಗಳು ಅವನತಿ ಹಾದಿ ಹಿಡಿಯೋದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಒಂದು ಸುರಕ್ಷಿತ ಮಾರುಕಟ್ಟೆ ವ್ಯವಸ್ಥೆಗೆ ದಕ್ಕೆ ತರುವ ಇಂಥ ಕಾನೂನುಗಳನ್ನು ಹಿಂಪಡೆದು ಮತ್ತೆ ಸರ್ಕಾರ ಮರುಪರಿಶೀಲನೆ ಮಾಡಬೇಕು ಅನ್ನೋದು ಕೆಲವು ರೈತ ಮುಖಂಡರ ಆಗ್ರಹವಾಗಿದೆ.