ಬೆಂಗಳೂರು: ಕೊರೊನಾದಿಂದ ಜನ ಹೈರಾಣಾಗಿ ಹೋಗಿದ್ದಾರೆ. ಇಷ್ಟು ದಿನ ಬೆಂಗಳೂರೇ ಎಲ್ಲಾ ಅಂದುಕೊಂಡಿದ್ದ ಯುವಕರು ಈಗ ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ಕಷ್ಟಾನೋ, ಸುಖಾನೋ ಹಳ್ಳಿಯಲ್ಲೇ ಕೃಷಿ ಮಾಡಿಕೊಂಡು ಜೀವನ ಸಾಗಿಸುವ ನಿರ್ಧಾರ ಮಾಡಿದ್ದಾರೆ.
ಕಳೆದ 3-4 ವರ್ಷದಿಂದ ಬೆಂಗಳೂರಲ್ಲಿ ಜೀವನ ಸಾಗಿಸುತ್ತಿದ್ವಿ. ಆದರೆ ಕೊರೊನಾ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇಲ್ಲೇ ಇದ್ದು ವ್ಯವಸಾಯ ಮಾಡು ಅಂತ ಮನೆಯಲ್ಲೂ ಹೇಳುತ್ತಿದ್ದಾರೆ. ಹಾಗಾಗಿ ಮತ್ತೆ ಬೆಂಗಳೂರಿಗೆ ಹೋಗುವ ಯೋಚನೆ ಇಲ್ಲ ಅಂತ ಗಡಿ ಜಿಲ್ಲೆಯ ಚಾಮರಾಜನಗರದ ಯುವಕರು ಹೇಳುತ್ತಿದ್ದಾರೆ.
Advertisement
Advertisement
ಬೆಂಗಳೂರು ಬಿಟ್ಟು ಬಂದ ಅನೇಕ ಉದ್ಯೋಗಿಗಳು ಮತ್ತೆ ಬೆಂಗಳೂರಿಗೆ ಕಾಲಿಡಲು ಭಯಪಡುತ್ತಿದ್ದಾರೆ. ವೈಟ್ ಫೀಲ್ಡ್ ನ ಫ್ಲಿಪ್ ಕಾರ್ಟ್ ಕಂಪನಿ ಉದ್ಯೋಗಿ ಹರೀಶ್ ತುಮಕೂರಲ್ಲೇ ಕೃಷಿ ಮಾಡಿಕೊಂಡು ಇರುತ್ತೀನಿ ಅಂತಿದ್ದಾರೆ. ಅದೇ ರೀತಿ ಪೀಣ್ಯದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಊರಲ್ಲೇ ಇದ್ದು ತಂದೆ-ತಾಯಿಯನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ.
Advertisement
Advertisement
ಉಡುಪಿಯಲ್ಲೂ ಕೊರೊನಾ ಸೋಂಕು ಹೆಚ್ಚಿದೆ. ಬೆಂಗಳೂರಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಬೆಂಗಳೂರಲ್ಲಿ ಆಸ್ಪತ್ರೆ ಸರಿಯಿಲ್ಲ, ಸರಿಯಾದ ಚಿಕಿತ್ಸೆ ಸಿಗುತ್ತೆ ಅನ್ನೋ ನಂಬಿಕೆ ಇಲ್ಲ. ಅದಕ್ಕಾಗಿ ಬೆಂಗಳೂರು ಬಿಟ್ಟು ಬಂದೆ ಎಂದು ಬೆಂಗಳೂರಿನಲ್ಲಿದ್ದ ಉದ್ಯೋಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿದ್ದ ಮತ್ತೊಬ್ಬ ಉದ್ಯೋಗಿ ಕೆಲಸಕ್ಕೆ ಕರೆದರೆ ಮಾತ್ರ ಬೆಂಗಳೂರಿಗೆ ಹೋಗುತ್ತೀನಿ. ಬೆಂಗಳೂರಿನಲ್ಲಿ ಕೊರೊನಾ ಭಯವಿದೆ ಎಂದಿದ್ದಾರೆ.
ಬೆಂಗಳೂರು ಅಂದರೆ ಸಾಕು ಕೂಲಿ ಕಾರ್ಮಿಕರು ಈಗ ಮೂಗು ಮುರಿಯುತ್ತಿದ್ದಾರೆ. ಸೋಂಕು ಹೆಚ್ಚಾಗುತ್ತಿದೆ. ಏನೇ ಆದರೂ ನಾವು ಬೆಂಗಳೂರಿಗೆ ಹೋಗಲ್ಲ. ನಮ್ಮ ಮನೆಯ ಸಾಮಗ್ರಿಗಳು ಬೆಂಗಳೂರಲ್ಲೇ ಇವೆ. ಅದನ್ನು ತರಲು ಹೋಗೋಣ ಅಂದರೂ ಭಯವಾಗುತ್ತದೆ. ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ ಇಲ್ಲೇ ಕೃಷಿ ಮಾಡಿ ಜೀವನ ಸಾಗಿಸುತ್ತೀವಿ ಎಂದು ಬೆಂಗಳೂರಿನ ಬಗ್ಗೆ ರಾಯಚೂರಿನ ಜನ ಆತಂಕ ವ್ಯಕ್ತಪಡಿಸಿದ್ದಾರೆ.