ಕಿಮೋ ಥೆರಪಿ ಚಿಕಿತ್ಸೆಯಿಂದಾಗಿ ಕೂದಲು ಹೆಚ್ಚಾಗಿ ಉದುರುತ್ತದೆ ಎಂದು ಹಲವರು ಭಾವಿಸಿದ್ದಾರೆ. ಆದ್ರೆ ಅದು ನಿಮ್ಮ ಕಲ್ಪನೆ. ಕ್ಯಾನ್ಸರ್ ರೋಗಿಗಳಿಗಂತೂ ಉದುರಿರುವ ಕೂದಲನ್ನು ಪುನಃ ಬೆಳೆಸುವುದೇಗೆ ಎಂಬುವುದೇ ಬಹು ದೊಡ್ಡ ಚಿಂತೆಯಾಗಿರುತ್ತದೆ. ಕೂದಲು ಉದುರುವಿಕೆಯು ಕೆಲವು ಅಡ್ಡ ಪರಿಣಾಮಗಳಿಂದ ಆಗುತ್ತದೆ. ಈ ಅಡ್ಡ ಪರಿಣಾಮಗಳನ್ನು ತಡೆಗಟ್ಟಲು ಹಲವಾರು ಟಿಪ್ಸ್‍ಗಳಿರುವುದನ್ನು ನೀವು ಈಗಾಗಲೇ ಕೇಳಿರಬಹುದು. ಸದ್ಯ ಕ್ಯಾನ್ಸರ್ ಚೇತರಿಕೆಯ ನಂತರ ಕೂದಲು ಉದುರುವಿಕೆಯನ್ನು ನಿಭಾಯಿಸುವುದು ಹೇಗೆ ಎಂಬ ಚಿಂತೆಗೆ ಕಾಸ್ಮೆಟಿಕ್ ತಜ್ಞ ಹಾಗೂ ನಿರ್ದೇಶಕ ಡಾ. ಡೆಬ್ರಾಜ್ ಶೋಮೆ ಎಂಬವರು ಕೆಲವು ಸಲಹೆಗಳನ್ನು ನೀಡಿದ್ದಾರೆ.
Advertisement
ಕ್ಯೂಆರ್ 678 ಚಿಕಿತ್ಸೆ: ಈ ಚಿಕಿತ್ಸೆಯು ಕೂದಲುದುರುವಿಕೆಯನ್ನು ತಡೆಗಟ್ಟುತ್ತದೆ. ಕೂದಲು ದಪ್ಪ ಮತ್ತು ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಕೂದಲು ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಚಿಕಿತ್ಸೆಯಲ್ಲಿ ಬಳಸುವ ಪಾಲಿಪೆಪ್ಲೈಡ್‍ಗಳು ಕೂದಲಿನ ಬೆಳವಣಿಗೆಗೆ ಕಾರಣವಾಗಿರುತ್ತದೆ. ಈ ಶಸ್ತ್ರ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಹಾಗೂ ಕೂದಲು ಸುರಕ್ಷಿತವಾಗಿರುತ್ತದೆ. ಈ ಶಸ್ತ್ರ ಚಿಕಿತ್ಸೆಯು ಕೂದಲು ಬೆಳೆಯಲು ಸುಮಾರು 6 ರಿಂದ 8 ರಷ್ಟು ಅವಧಿಗಳನ್ನು ತೆಗೆದುಕೊಳ್ಳಬಹುದು.
Advertisement
Advertisement
ಮೆಸೊಥೆರಪಿ: ಈ ಚಿಕಿತ್ಸೆಯು ಕೂದಲುದುರುವಿಕೆಯಿಂದ ಬಳಲುತ್ತಿರುವ ಕ್ಯಾನ್ಸರ್ ರೋಗಿಗಳಲ್ಲಿ ನೈಸರ್ಗಿಕವಾಗಿ ಕೂದಲು ಬೆಳೆಯಲು ಸಹಾಯಕವಾಗಿದೆ. ಇದು ರಾಸಾಯನಿಕ ಹಾಗೂ ಯಾಂತ್ರಿಕ ಪ್ರಚೋದನೆಯಿಂದ ಕೂಡಿರುವ ದ್ವಿಪ್ರಕ್ರಿಯೆಯಾಗಿದ್ದು, ಇದಕ್ಕೆ ರಾಸಾಯನಿಕ, ಖನಿಜಗಳು, ಅಮೈನೋ ಆಮ್ಲ, ಜೀವಸತ್ವಗಳು ಮತ್ತು ಕೋ ಎಂಜೈಮ್ ಅಂಶಗಳಿರುವ ಚುಚ್ಚುಮದ್ದನ್ನು ನೀಡುವುದಾಗಿದೆ. ಇನ್ನೂ ಈ ಚಿಕಿತ್ಸೆ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಭೇಟಿ ಮಾಡುವುದು ಸೂಕ್ತ.
Advertisement
ಪ್ಲೇಟ್‍ಲೆಟ್ ಭರಿತ ಪ್ಲಾಸ್ಮಾ ಥೆರಪಿ(ಪಿಆರ್‍ಪಿ): ಈ ಚಿಕಿತ್ಸೆಯು ದೇಹದಲ್ಲಿನ ಕೆಲವು ಪೀಡಿತ ಪ್ರದೇಶಗಳಲ್ಲಿ ಅಡ್ಡ ಪರಿಣಾಮಗಳಿಂದ ದೇಹದಲ್ಲಿ ಉತ್ಪತ್ತಿಯಾಗುವ ರಕ್ತಕ್ಕೆ ಪ್ಲಾಸ್ಮಾ ಥೆರಪಿಯಲ್ಲಿ ಚುಚ್ಚು ಮದ್ದನ್ನು ನೀಡಿ ಕೂದಲು ಪುನಃ ಬೆಳೆಯಸಬಹುದಾಗಿದೆ.
ಕೂದಲು ಕಸಿ: ಇದರಲ್ಲಿ ಎರಡು ರೀತಿಯ ಕೂದಲು ಕಸಿಗಳಿದ್ದು, ಫೋಲಿಕ್ಯುಲಾರ್ ಯುನಿಟ್ ಹಾಗೂ ಟ್ರಾನ್ಸ್‍ಪ್ರಾಂಟೇಶನ್ (ಎಫ್‍ಯುಟಿ) ಸ್ಟ್ರಿಪ್ ಟೆಕ್ನಿಕ್ ಎಂದು ಅವುಗಳನ್ನು ಕರೆಯಲಾಗುತ್ತದೆ. ಹೊರಗಡೆಯಿಂದ ಕೂದಲ ನಾಟಿಯನ್ನು ತರಿಸುವುದಾಗಿದ್ದು, ತಲೆಯಲ್ಲಿರುವ ಗಾಯ ಕಾಣದಂತೆ ಹಾಗೂ ಕಡಿಮೆ ಕೂದಲು ಹೊಂದಿದವರಿಗೆ ಕೇಶವಿನ್ಯಾಸ ಮಾಡಲಾಗುತ್ತದೆ. ಫೋಲಿಕ್ಯುಲಾರ್ ಯುನಿಟ್ ಎಕ್ಸ್ ಟ್ರಾಕ್ಷನ್ ವಿಧಾನದಲ್ಲಿ ಕೂದಲುಗಳನ್ನು ಒಂದೊಂದಾಗಿ ಕತ್ತರಿಸಿ ಕೇಶವಿನ್ಯಾಸ ಮಾಡುವ ಪ್ರಕ್ರಿಯೆ ಇದಾಗಿದೆ.