– ಮಗನ ಮಾನವೀಯ ಗುಣಕ್ಕೆ ಹೆಮ್ಮೆ ವ್ಯಕ್ತಪಡಿಸಿದ ತಂದೆ
ಮುಂಬೈ: ಕೊರೊನಾ ವೈರಸ್ ಎಂಬ ಮಹಾಮಾರಿ ದೇಶಕ್ಕೆ ಕಾಲಿಟ್ಟ ಬಳಿಕ ಜನ-ಜೀವನ ಅಸ್ತವ್ಯಸ್ತವಾಗಿದ್ದು, ಅನೇಕ ಮಂದಿ ಮಾನವೀಯ ಕೆಲಸಗಳನ್ನು ಮಾಡುತ್ತಿದ್ದಾರೆ. ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ನೀಡಿ ಮಾನವೀಯತೆ ಮೆರೆದರೆ, ಇಲ್ಲೊಬ್ಬ 17 ವರ್ಷದ ಹುಡುಗ ತಾನು ಕೂಡಿಟ್ಟ ಹಣದಿಂದ ಧಾನ್ಯ, ಪಿಪಿಇ ಕಿಟ್ ಹಾಗೂ ಸ್ಯಾನಿಟೈಸರ್ ಗಳನ್ನು ಖರೀದಿ ಮಾಡಿ ಅದನ್ನು ಅಗತ್ಯ ಇರುವವರಿಗೆ ನೀಡಿದ್ದಾನೆ.
Advertisement
ಹೌದು. ಹುಸೈನ್ ಝಾಕೀರ್ ಸುಮಾರು 15 ಸಾವಿರ ಹಣ ಕೂಡಿಟ್ಟಿದ್ದ. ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ಜನರ ಬದುಕನ್ನು ದಿಕ್ಕಾಪಾಲಾಗಿಸಿದೆ. ಅಲ್ಲದೆ ಮೆಡಿಕಲ್ ಸಿಬ್ಬಂದಿ ಹಾಗೂ ಪೊಲೀಸರು ಕೂಡ ಕೊರೊನಾಗೆ ಬಲಿಯಾಗುತ್ತಿರುವ ಸುದ್ದಿಗಳನ್ನು ಕೇಳಿದ ಝಾಕೀರ್, ತಾನು ಕೂಡಿಟ್ಟಿದ್ದ ಹಣದಿಂದ ಕೊರೊನಾ ಹರಡುವುನ್ನು ತಡೆಗಟ್ಟಲು ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿಸಿ ಅವುಗಳನ್ನು ವಿತರಿಸಲು ನಿರ್ಧಾರ ಮಾಡಿದ್ದಾನೆ.
Advertisement
Advertisement
ಮೆಡಿಕಲ್ ಸಿಬ್ಬಂದಿ ಹಾಗೂ ಪೊಲೀಸರು ಕೊರೊನಾಗೆ ಬಲಿಯಾಗುತ್ತಿರುವ ವಿಚಾರವನ್ನೇ ತಲೆಯಲ್ಲಿಟ್ಟುಕೊಂಡ ಬಾಲಕ ತಾನು ಉಳಿಸಿಕೊಂಡಿದ್ದ ಹಣದಿಂದ ಪಿಪಿಇ ಕಿಟ್ ಹಾಗೂ ಇತರ ವಸ್ತುಗಳನ್ನು ಖರೀದಿ ಮಾಡಿದ್ದಾನೆ. ಅಲ್ಲದೆ ಅವುಗಳನ್ನು ಅಗತ್ಯ ಇರುವವರಿಗೆ ವಿತರಣೆ ಕೂಡ ಮಾಡಿದ್ದಾನೆ. ಹುಡುಗನ ಈ ಸಾರ್ಥಕ ಸೇವೆಗೆ ಗೆಳೆಯರು ಕೂಡ ಸಾಥ್ ನೀಡಿದ್ದಾರೆ.
Advertisement
ಹುಡುಗನ ಈ ಮಹಾನ್ ಕಾರ್ಯ ಬೆಳಕಿಗೆ ಬರುತ್ತಿದ್ದಂತೆಯೇ ರೋಟರಿ ಆ್ಯಕ್ಟ್ ಕ್ಲಬ್ ನವರು ಆತನನ್ನು ಗೌರವಿಸಿದ್ದಲ್ಲದೆ, ತಮ್ಮ ಕ್ಲಬ್ ನ ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ಈ ಮೂಲಕ ಝಾಕೀರ್, ಸಮುದಾಯ ಆಧಾರಿತ ಅತ್ಯಂತ ಕಿರಿಯ ಅಧ್ಯಕ್ಷನಾಗಿದ್ದಾನೆ ಎಂದು ರೋಟರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಒಂದು ದಿನ ನನ್ನ ಮಗ ಬಹಳ ಆತಂಕಕ್ಕೀಡಾಗಿ ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಹಾಗೆಯೇ ನಾನು ಆತನಿಗೆ ಸಹಾಯ ಮಾಡುತ್ತಿದ್ದೇನೆ. ಹೀಗಾಗಿ ಇಂದು ನನ್ನ ಮಗನ ಬಗ್ಗೆ ನನಗೆ ಬಹಳ ಹೆಮ್ಮೆಯಾಗುತ್ತಿದೆ. ಯಾಕಂದ್ರೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ನನ್ನ ಮಗನಲ್ಲಿ ಸಹಾಯ ಮಾಡುವ ಮನಸ್ಸು ಕಂಡು ನನಗೆ ತುಂಬಾನೆ ಖುಷಿಯಾಗಿದೆ ಎಂದು ಝಾಕೀರ್ ತಂದೆ ಹೇಳಿದ್ದಾರೆ.
ಕೋವಿಡ್ 19 ಬಂದಾಗಿನಿಂದ ನಾವು ಬಹಳ ಭಯದಿಂದಲೇ ಜೀವನ ನಡೆಸುತ್ತಿದ್ದೇವೆ. ಹೀಗಾಗಿ ನಮಗೆ ಇಲ್ಲಿ ಕೆಲಸ ಮಾಡಲು ಭಯವಾಗಿ ಮತ್ತೆ ತಮ್ಮೂರಿಗೆ ವಾಪಸ್ ಹೋಗಲು ನಿರ್ಧರಿಸಿದೆವು. ಆದರೆ ನಮ್ಮೆಲ್ಲ ಕಷ್ಟಗಳನ್ನು ಅರ್ಥ ಮಾಡಿಕೊಂಡ ಝಾಕೀರ್, ನಮಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದ್ದಾನೆ. ಆತ ನಮಗೆ ಸಹಾಯ ಮಾಡಿರುವುದು ನಮಗೆ ತುಂಬಾನೇ ಪ್ರಯೋಜನವಾಗಿದೆ. ಅದರಲ್ಲೂ ಇಷ್ಟು ಸಣ್ಣ ವಯಸ್ಸಿನಲ್ಲಿ ಮಾನವೀಯತೆ ಗುಣ ಕಂಡು ನಿಜಕ್ಕೂ ಆತನಿಗೆ ಚಿರಋಣಿಯಾಗಿದ್ದೇವೆ ಎಂದು ವಾಚ್‍ಮ್ಯಾನ್ ಒಬ್ಬರು ತಿಳಿಸಿದ್ದಾರೆ.