ಮಂಗಳೂರು: ಪಾಕೇಟ್ ಮನಿಯನ್ನು ಬಡ ರೋಗಿಗಳಿಗೆ ನೀಡಿ ಬರ್ತ್ ಡೇಯನ್ನು ಪುತ್ತೂರಿನ 3 ವರ್ಷದ ಪೋರಿ ಆಚರಿಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಖ್ಯಾತ ಯಕ್ಷಗಾನ ಕಲಾವಿದರಾಗಿದ್ದ ದಿ.ಶ್ರೀಧರ್ ಭಂಡಾರಿ ಅವರ ಮೊಮ್ಮಗಳು, ದೀಪಕ್ ಶೆಟ್ಟಿ ಹಾಗೂ ಡಾ.ಅನಿಲಾ ದಂಪತಿಯ ಪುತ್ರಿ, ವೀವೆಕಾನಂದ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ದಿಶಾರವರು ತನ್ನ ಹುಟ್ಟಿದಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.
ತನ್ನ ತಾತ, ಅಜ್ಜಿ, ಮಾವ, ಅಪ್ಪ, ಅಮ್ಮ ನೀಡಿದ್ದ ಸುಮಾರು 10 ಸಾವಿರದಷ್ಟು ಪಾಕೆಟ್ ಮನಿಯನ್ನು ಕೂಡಿಟ್ಟಿದ್ದ ಪುತ್ತೂರಿನ ವಿದ್ಯಾರ್ಥಿನಿಯೊಬ್ಬರು ಈ ಹಣದಿಂದ ವೈದ್ಯರ ಮೂಲಕ ಬಡರೋಗಿಗಳ ಚಿಕಿತ್ಸೆಗೆ ಬಳಕೆಯಾಗಬೇಕೆಂದು ಪುತ್ತೂರಿನ ಆದರ್ಶ ಆಸ್ಪತ್ರೆಯ ಡಾ. ಎಂ.ಕೆ.ಪ್ರಸಾದ್ ಅವರಿಗೆ ಹಸ್ತಾಂತರ ಮಾಡುವ ಮೂಲಕ ತನ್ನ ಹುಟ್ಟಿದ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ.
ಕೋವಿಡ್ ಹಿನ್ನಲೆಯಲ್ಲಿ ತನ್ನ ಜನ್ಮದಿನವನ್ನು ಸಿಂಪಲ್ ಆಗಿ ಆಚರಿಸಲು ನಿರ್ಧರಿಸಿದ್ದ ದಿಶಾ, ಕೋವಿಡ್ ನಿಂದ ತತ್ತರಿಸಿ ಬಡವರ ಬವಣೆಗಳನ್ನು ಮಾಧ್ಯಮಗಳ ಮೂಲಕ ಅರಿತಿದ್ದರು. ಹೀಗಾಗಿ ದಿಶಾ ತನ್ನ ಸ್ವ ಇಚ್ಛೆಯಿಂದ ಬಡ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡಿದ್ದು, ಪುಟ್ಟ ಪೋರಿಯ ವಿಶಾಲ ಹೃದಯಕ್ಕೆ ಭಾರೀ ಜನ ಮೆಚ್ಚುಗೆ ವ್ಯಕ್ತವಾಗಿದೆ.