ಚೆನ್ನೈ: ಪುಟ್ಟ ಬಲಕಿಯೊಬ್ಬಳು ಕೂಡಿಟ್ಟ 2 ಸಾವಿರ ಹಣವನ್ನು ಕೊರೊನ ಪರಿಹಾರ ನಿಧಿಗೆ ಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ತಮಿಳುನಾಡಿನಲ್ಲಿ 11 ವರ್ಷದ ಬಾಲಕಿ ತನಗಾದ ನೋವು ಬೇರೆಯಾರಿಗೂ ಆಗದಿರಲಿ ಎಂದು, 2 ಸಾವಿರ ರೂಪಾಯಿ ಹಣವನ್ನು ಕೊರೊನಾ ವಿರುದ್ಧದ ಸಿಎಂ ಪಬ್ಲಿಕ್ ರಿಲೀಫ್‍ಗೆ ನೀಡಿದ್ದಾಳೆ.
ಎನ್ ರಿಧನಾ ತಾನು ನಾಲ್ಕು ವರ್ಷಗಳಿಂದ ಕೂಡಿಟ್ಟ ಹಣವನ್ನು ದೇಣಿಗೆಯಾಗಿ ಕೊಟ್ಟಿದ್ದಾಳೆ. ರಿಧನಾಳ ತಂದೆಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ತನ್ನ ಪಾಕೆಟ್ ಮನಿಯಲ್ಲಿ ಕೂಡಿಟ್ಟ ಹಣವನ್ನು ಅವರ ಚಿಕಿತ್ಸೆಗೆ ಬಳಸಬೇಕು ಎಂದುಕೊಂಡಿದ್ದಳು. ದುರಾದೃಷ್ಟವಶಾತ್ ಕಳೆದ ವರ್ಷ ಫೆಬ್ರವರಿಯಲ್ಲಿ ಆಕೆಯ ತಂದೆ ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ತಾನು ಸಂಗ್ರಹಗಿಸಿಟ್ಟುಕೊಂಡಿದ್ದ ಹಣವನ್ನು ಕೊರೊನಾ ಸೋಂಕಿತರಿಗೆ ನೆರವಾಗಲಿ ಎಂದು ರಿಧನಾ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾಳೆ.