ಕುರ್ಚಿ ದಾಹ ಬಿಡ್ರಿ, ಸರಿಯಾಗಿ ಕೆಲಸ ಮಾಡಿ: ಎಂ.ಬಿ.ಪಾಟೀಲ್ ಕಿಡಿ

Public TV
1 Min Read
MB PATIL

ಹಾವೇರಿ: ಕೊರೊನಾ ಸಂಕಷ್ಟದ ಸಮಯದಲ್ಲಿ ಕೊರೊನಾ ನಿರ್ವಹಣೆ ಬಿಟ್ಟು ಅಧಿಕಾರ ದಾಹ ಪ್ರದರ್ಶನ ಮಾಡುತ್ತಿದ್ದಾರೆ. ಕುರ್ಚಿ ದಾಹ ಬಿಡ್ರಿ, ಸರಿಯಾಗಿ ಕೆಲಸ ಮಾಡಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಒಬ್ಬರಿಗೊಬ್ಬರು ತಾಳ ಮೇಳ ಇಲ್ಲ. ಸಿಎಂ ಬದಲಾವಣೆ ಮಾಡಬೇಕು ಅಂತಾರೆ. ಪರಸ್ಪರ ಸಹಕಾರವಿಲ್ಲ. ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಸೋ ಕೆಲಸ ಮಾಡಬೇಕು ಎಂದು ಎಂ.ಬಿ.ಪಾಟೀಲ್ ಅವರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

BSY Meeting 3 medium

ಕೋವಿಡ್‍ನಲ್ಲಿ ಸುರೇಶ್ ಅಂಗಡಿಯವರನ್ನ ಕಳೆದುಕೊಂಡಿದ್ದೇವೆ. ಡಿಸಿಎಂ ಲಕ್ಷ್ಮಣ ಸವದಿಯವರ ಮನೆಯಲ್ಲಿ ಅವರ ಸಹೋದರರನ್ನ ಕಳೆದುಕೊಂಡಿದ್ದೇವೆ. ಕುರ್ಚಿ ಬಿಡ್ರಿ, ನಿಮ್ಮ ಮನೆ, ನಮ್ಮ ಮನೆಯಲ್ಲೂ ನೋವಾಗಿವೆ. ಸರಿಯಾಗಿ ಕೆಲಸ ಮಾಡಿ ಎಂದರು.

Laxman Savadi 1

ನರ್ಸ್, ವೈದ್ಯರು ಗಂಟೆಗಟ್ಟಲೆ ಪಿಪಿಇ ಕಿಟ್ ಹಾಕೊಕೊಂಡು ನಮಗಾಗಿ ಕೆಲಸ ಮಾಡಿದ್ದಾರೆ. ಕೊರೊನಾದಲ್ಲಿ ವೈಫಲ್ಯ, ಬೆಲೆ ಏರಿಕೆ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧಿಕಾರದ ಮದದಲ್ಲಿವೆ. ಇವರು ಜನರ ಒಳಿತು ಬಯಸಿಲ್ಲ. ಈ ಸರ್ಕಾರಗಳು ತೊಲಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯೋ ನೈತಿಕ ಹಕ್ಕಿಲ್ಲ. ಲಕ್ಷಾಂತರ ಜನರ ಜೀವ ಕಳೆದಿದ್ದೀರಿ, ಲಕ್ಷಾಂತರ ಮಕ್ಕಳನ್ನ ಅನಾಥರನ್ನಾಗಿ ಮಾಡಿದ್ದೀರಿ, ಲಕ್ಷಾಂತರ ಕುಟುಂಬಗಳನ್ನ ಮುರಿದಿದ್ದೀರಿ. ಇದೆಲ್ಲದರ ಜೊತೆಗೆ ಜನರ ಮೇಲೆ ಭಾರ ಹಾಕಿದ್ದೀರಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರಿಗೆ ವರುಣಾ ಕ್ಷೇತ್ರ ಬಿಟ್ಟು ಹೋಗ್ಬೇಡಿ ಅಂದಿದ್ದೆ: ಸುಧಾಕರ್

Share This Article
Leave a Comment

Leave a Reply

Your email address will not be published. Required fields are marked *