ಬೆಂಗಳೂರು: ಕುರಿ ಸಾಕಾಣಿಕೆ ಎಂಬುವುದು ಒಂದು ಎಟಿಎಂ ಕಾರ್ಡ್ ಇದ್ದ ಹಾಗೇ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
Advertisement
ದರ್ಶನ್ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಬಿಡುಗಡೆಗೆ ರೆಡಿಯಾಗಿದೆ. ಚಿತ್ರ ಕುರಿತ ಒಂದಷ್ಟು ಇಂಟರೆಸ್ಟಿಂಗ್ ಸ್ಟೋರಿಯನ್ನು ಪಬ್ಲಿಕ್ ಟಿವಿ ಜೊತೆ ದರ್ಶನ್ ಹಂಚಿಕೊಂಡಿದ್ದಾರೆ. ಇಷ್ಟು ದಿನ ಆನೆ, ಕುದುರೆ, ಶ್ವಾನ ಹೀಗೆ ಹಲವು ಪ್ರಾಣಿ ಪಕ್ಷಿಗಳನ್ನು ಇಷ್ಟ ಪಡುತ್ತಿದ್ದ ದರ್ಶನ್ ಇದೀಗ ಕುರಿ ಸಾಕಾಣಿಕೆ ವಿಚಾರವಾಗಿ ತಮಗಿರುವ ಒಲವನ್ನು ತೊಡಿಕೊಂಡಿದ್ದಾರೆ.
Advertisement
Advertisement
ಒಮ್ಮೆ ಕಾರ್ಯಕ್ರಮಯೊಂದರ ಬಾಡೂಟಕ್ಕೆ ದರ್ಶನ್ ಸ್ನೇಹಿತರೊಬ್ಬರು ಕುರಿ ಪಡೆದಿದ್ದು, ಕಾರ್ಯಕ್ರಮದ ಮುಗಿದ ಬಳಿಕ ದರ್ಶನ್ ಬಳಿ ಕುರಿ ಬಾಡೂಟದ ಬಗ್ಗೆ ಸಂತಸ ವ್ಯಕ್ತಪಡಿಸಿ, ಉಳಿದ ಕುರಿಯನ್ನು ಏನು ಮಾಡುತ್ತೀಯಾ ಎಂಬ ಪ್ರಶ್ನೆ ಕೇಳಿದ್ದರಂತೆ. ಈ ವೇಳೆ ಲಾಕ್‍ಡೌನ್‍ನಲ್ಲಿ ಕೆಲಸವಿಲ್ಲದೇ ಖಾಲಿ ಕೈನಲ್ಲಿ ಕುಳಿತಿದ್ದ ದರ್ಶನ್, ಏಕೆ ಕುರಿ ಸಾಕಾಣಿಕೆ ಮಾಡಬಾರದು ಎಂದು ಆಲೋಚಿಸಿ ಕುರಿ ಸಾಕಲು ಆರಂಭಿಸಿದ್ದಾಗಿ ಹೇಳಿಕೊಂಡಿದ್ದಾರೆ.
Advertisement
ಲಾಕ್‍ಡೌನ್ ಸಮಯದಲ್ಲಿ ಕುರಿ ಸಾಕಿ ಮಾರಾಟ ಮಾಡಿದ್ದರಿಂದ ಖರ್ಚಿಗೆ ಹಣ ಸಂಪಾದಿಸಿದ ದರ್ಶನ್ ಕುರಿ ಸಾಕಾಣಿಕೆ ಎಂಬುವುದು ಒಂದು ಎಟಿಎಂ ಕಾರ್ಡ್ ಇದ್ದ ಹಾಗೇ. ಕಷ್ಟದ ಸಮಯದಲ್ಲಿ ಕುರಿಸಾಕಾಣಿಕೆ ನಮ್ಮ ಕೈ ಹಿಡಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಸ್ಯ ನಟ ಚಿಕ್ಕಣ್ಣ ಕೂಡ ದರ್ಶನ್‍ನಿಂದ ಸ್ಪೂರ್ತಿ ಪಡೆದು ಫಾರ್ಮ್ ಹೌಸ್‍ನಲ್ಲಿ ಕುರಿಸಾಕಾಣಿಯನ್ನು ಆರಂಭಿಸಿದ್ದು, ಕುರಿ ಜೊತೆ ಈವರೆಗೂ ಸುಮಾರು 650 ಕೋಳಿಯನ್ನು ಸಾಕಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೇ ಫಾರ್ಮ್ ಹೌಸ್‍ಗೆ ಭೇಟಿ ನೀಡಿ ಕುರಿ ಸಾಕಾಣಿಕೆ ಕುರಿತ ಕೆಲವೊಂದು ಟಿಪ್ಸ್ ಕೂಡ ನೀಡಿರುವುದಾಗಿ ದರ್ಶನ್ ಈ ವೇಳೆ ತಿಳಿಸಿದರು.
ಅಷ್ಟಕ್ಕೂ ಕುರಿ ಸಾಕಾಣಿಕೆ ಅಷ್ಟು ಸುಲಭದ ಕೆಲಸವಲ್ಲ. ಕೆಲವು ದಿನಗಳ ಹಿಂದೆ ಹಕ್ಕಿ ಜ್ವರದಿಂದ ಕಾಣಿಸಿಕೊಂಡು ಕೋಳಿಗಳು ಮೃತಪ್ಟವು ಹಾಗೆಯೇ ಆಕಸ್ಮಿಕವಾಗಿ ಕುರಿ ಕಾಯಿಲೆಯಿಂದ ಮೃತಪಟ್ಟರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಂದು ಹೇಳಿಕೊಂಡಿದ್ದಾರೆ.