ಕುಮಾರಸ್ವಾಮಿ ನಿಲುವು ಹೀಗೆ ಇರಲಿ: ಸಿ.ಟಿ ರವಿ

Public TV
2 Min Read
ravi

– ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ನಿಲುವು ಹೀಗೆ ಇರಲಿ. ಅವರು ಚಂಚಲ ನಿಲುವು ತಾಳಬಾರದು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

ಕಾರ್ಯಕಾರಿಣಿ ಸಭೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ಜೊತೆ ಇರುತ್ತಿದ್ದರೆ ನಾನು ಸಿಎಂ ಆಗಿರುತ್ತಿದ್ದೆ ಅನ್ನೋ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅಡುಗೆ ಹಾಳಾದ ಮೇಲೆ ಒಲೆ ಉರಿದ್ರೆ, ಕೆಟ್ಟ ಮೇಲೆ ಬುದ್ಧಿ ಬಂದ್ರೆ ಹೇಗೆ ಅನ್ನೋ ಗಾದೆ ಮಾತಿದೆ. ಕುಮಾರಸ್ವಾಮಿಯವರಿಗೆ ಕೆಟ್ಟ ಮೇಲೆ ಬುದ್ಧಿ ಬಂದಿದೆ. ಕುಮಾರಸ್ವಾಮಿ ಇನ್ಮೇಲೆ ಯಾವತ್ತೂ ಕಾಂಗ್ರೆಸ್ ಸಹವಾಸ ಮಾಡಬೇಡಿ. ಅಂಬೇಡ್ಕರ್ ರವರು ಕಾಂಗ್ರೆಸ್ ಉರಿಯುವ ಮನೆಯಾಗಿದೆ ಎಂದು ಹೇಳಿದ್ದರು ಎಂದರು.

hdk

ಇದೇ ವೇಳೆ ಕಲಬೆರಿಕೆ ಆಗಿದೆ ಅನ್ನೋ ಹೇಳಿಕೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಇವತ್ತು ಚಿತ್ರ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ಕ್ರಾಸ್ ಬಿಡ್ ಬಗ್ಗೆ ಮಾತನಾಡಿದ್ದನ್ನ ಕೇಳಿದ್ದೀರಾ?, ನಮ್ಮ ದೇಶದಲ್ಲಿ ಎಲ್ಲರೂ ಭಾವನೆ ಜೊತೆಗೆ ಬದುಕುತ್ತಾರೆ. ಡಿಎನ್ ಎ ಕ್ರಾಸ್ ಬಿಡ್ ಹಾಗೂ ಐಡಿಯಾಲಜಿ ಕ್ರಾಸ್ ಬಿಡ್ ಬೇರೆ ಬೇರೆ. ವೈಚಾರಿಕವಾಗಿ ಸಿದ್ದರಾಮಯ್ಯ ಕ್ರಾಸ್ ಬಿಡ್ ಆಗಿದ್ದಾರೆ. ಸಿದ್ದರಾಮಯ್ಯ ಮನೆಯವರು ಸಹ ಗೋ ಸೇವೆ ಮಾಡಿದವರು. ಆದರೆ ಅದೇ ಮನೆತನದ ಸಿದ್ದರಾಮಯ್ಯ ಇಂದು ಗೋಹತ್ಯೆ ಮಸೂದೆ ವಿರೋಧ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.

siddaramaiah

ರಾಮಮಂದಿರ ಸ್ಥಾಪನೆ ಮಾಡಲ್ಲ ಅಂದಿದ್ರು. ಆದರೆ ರಾಮಮಂದಿರಕ್ಕೆ ಅಡಿಪಾಯ ಹಾಕಿದ್ದೇವೆ. ಆರ್ಟಿಕಲ್ 370 ರದ್ದು ಆಗಲ್ಲ ಅಂತಿದ್ರು, ಅದನ್ನ ಮಾಡಿ ತೋರಿಸಿದ್ದೇವೆ. ಗೊಹತ್ಯೆ ನಿಷೇಧ ಕಾಯ್ದೆ ನಾವೆಲ್ಲದೇ ಬೇರೆ ಯಾರು ಜಾರಿಗೆ ತರುತ್ತಾರೆ. ಮುಂದೊಂದು ದಿನ ಕಾಮನ್ ಸಿವಿಲ್ ಕೋಡ್ ಜಾರಿಗೆ ಬಂದರೂ ಅಚ್ಚರಿಯಿಲ್ಲ ಎಂದು ಅವರು ಹೇಳಿದರು.

ct ravi 1

ಭಾರತದಲ್ಲಿ ರೈತರ ಬೆಳೆಗೆ ಅತಿ ಹೆಚ್ಚು ದರ ನೀಡಿದ್ದು, ಕಿಸಾಸ್ ಸಮ್ಮಾನ್ ಯೋಜನೆ ಕೊಟ್ಟಿದ್ದು ಬಿಜೆಪಿ. ರೈತರ ಜೊತೆ ಹಿಂದೆಯೂ ಬಿಜೆಪಿ ಇತ್ತು, ಮುಂದೆಯೂ ರೈತರ ಜೊತೆ ಇರುತ್ತೆ. ನಾನು ರೈತನ ಮಗ. ಕೃಷಿ ಮಸೂದೆಯನ್ನ ವಿರೊಧಿಸುವವರು ಮಸೂದೆಯನ್ನ ಸರಿಯಾಗಿ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *