ಬೆಂಗಳೂರು: ನಾನು ಕುಮಾರಸ್ವಾಮಿಯವರ ಹೇಳಿಕೆಯನ್ನು ಸ್ವಾಗತ ಮಾಡುತ್ತೇನೆ. ಯಾರು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೋ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ದಿನೇಶ್ ಕಲ್ಲಹಳ್ಳಿಯವರು ಹೇಳಿದ್ದಾರೆ.
ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ವೈಯಕ್ತಿಕವಾಗಿ ಯಾವುದೇ ಭದ್ರತೆ ನೀಡಿರಲಿಲ್ಲ, ಕೇವಲ ಮನೆಗೆ ಮಾತ್ರ ಭದ್ರತೆ ನೀಡಿದ್ದರು. ಆದರೆ ಇಂದು ಭದ್ರತೆ ಒದಗಿಸಿದ್ದಾರೆ ಹಾಗಾಗಿ ತನಿಖೆಗೆ ಸಹಕಾರ ನೀಡುವ ಸಲುವಾಗಿ ವಿಚಾರಣೆಗೆಂದು ಠಾಣೆಗೆ ಬಂದಿದ್ದೇನೆ ಎಂದರು.
ನಾನು ಕುಮಾರಸ್ವಾಮಿಯವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಯಾರು ಬ್ಲಾಕ್‍ಮೇಲ್ ಮಾಡುತ್ತಿದ್ದರೋ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ತಿಳಿಸಿದರು. ಇನ್ನೂ ಸಂತ್ರಸ್ತೆ ವಿಚಾರವಾಗಿ ಮಾತನಾಡಿದ ಅವರು, ನನಗೆ ಬಂದ ಮಾಹಿತಿಯನ್ನು ಪಡೆದು ದೂರು ಉಲ್ಲೇಖಿಸಿದ್ದೇನೆ. ಪೊಲೀಸ್ ಇಲಾಖೆಯವರು ತನಿಖೆ ಮಾಡಿ ಉಳಿದ ಮಾಹಿತಿಯನ್ನು ಪತ್ತೆ ಮಾಡಬೇಕು. ಈಗಾಗಲೇ ಎಲ್ಲವನ್ನು ದೂರಿನಲ್ಲಿ ಸ್ಪಷ್ಟವಾಗಿ ತಿಳಿಸಿಲಾಗಿದೆ. ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಹೇಳಿದರು
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸಿನವರು ಉತ್ತಮವಾಗಿ ತನಿಖೆ ಮಾಡುತ್ತಿದ್ದಾರೆ. ತನಿಖೆ ಪೂರಕವಾಗಿ ಏನು ನೀಡಬೇಕೆಂದು ನಂತರ ನಾನು ತಿಳಿಸುತ್ತೇನೆ ಎಂದು ನುಡಿದರು.