ಮಂಡ್ಯ: ಒಂದು ಕಡೆ ಜೆಡಿಎಸ್ ನಾಯಕರು ಮತ್ತು ಸಂಸದೆ ಸುಮಲತಾ ಅಂಬರೀಶ್ ನಡುವೆ ಟಾಕ್ ವಾರ್ ನಡೆಯುತ್ತಿದ್ರೆ ಮತ್ತೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಅಭಿಮಾನಿಗಳ ವಾರ್ ಕೂಡ ಮುಂದುವರಿದಿದೆ.
ಮೊದಲು ಅಂಬರೀಶ್ ಅವರ ಜೊತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕೈ ಕಟ್ಟಿ ನಿಂತಿರುವ ಫೋಟೋ ಹಾಕಿ ‘ಸಿಂಹದ ಎದುರು ಕೈ ಕಟ್ಟಿ ನಿಂತುಕೊಂಡು ತುಟಿ ಬಿಚ್ಚದವರು ಈಗ ಮಾತಮಾಡುತ್ತಿದ್ದಾರೆ’ ಎಂದು ಸುಮಲತಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದೀಗ ಈ ಪೋಸ್ಟ್ ಗೆ ಜೆಡಿಎಸ್ ಹಾಗೂ ಕುಮಾರಸ್ವಾಮಿ ಫ್ಯಾನ್ಸ್ ಒಂದಷ್ಟು ಫೋಟೋಗಳನ್ನು ಹಾಕಿ ಸುಮಲತಾ ಫ್ಯಾನ್ಸ್ ಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಅಕ್ಕಾ ನಮ್ಮ ಕ್ಷೇತ್ರಕ್ಕೂ ಬನ್ನಿ, ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ: ಸುರೇಶ್‍ಗೌಡ
ಕುಮಾರಸ್ವಾಮಿ ಅವರು ಜನರೊಂದಿಗೆ ಹಾಗೂ ಇತರ ನಾಯಕರುಗಳೊಂದಿಗೆ ಕೈ ಕಟ್ಟಿ ಹಾಕಿಕೊಂಡು ನಿಂತಿರುವ ಫೋಟೋಗಳನ್ನು ಹಾಕಿ, ‘ಕುಮಾರಸ್ವಾಮಿ ಯಾರ ಮೇಲಿನ ಭಯದಿಂದ ಕೈ ಕಟ್ಟಿಕೊಂಡು ನಿಲ್ಲುವುದಿಲ್ಲ. ದೇವೇಗೌಡರು ಹೇಳಿಕೊಟ್ಟಿರುವ ಸಂಸ್ಕಾರದಿಂದ ಅವರು ಕೈ ಕಟ್ಟಿ ಹಾಕಿಕೊಂಡು ನಿಲ್ಲುತ್ತಾರೆ. ಸಣ್ಣ ಮಗುವಿನ ಎದುರುಗಡೆ ಕೂಡ ಕೈ ಕಟ್ಟಿಕೊಂಡು ನಿಲ್ಲುವ ಸಂಸ್ಕಾರ ಅವರಿಗೆ ಇದೆ. ಅಂಬರೀಶ್ ಅವರು ಸಹ ಅವರ ಮುಂದೆ ಇದ್ದಾಗ ಕೈ ಕಟ್ಟಿಕೊಂಡ ಉದಾಹರಣೆಗಳು ಇವೆ. ಇಷ್ಟಕ್ಕೆ ಭಯ ಎಂದೆಲ್ಲಾ ಉಲ್ಲೇಖ ಮಾಡುವುದು ಸಂಸ್ಕಾರ ಇಲ್ಲದವರು ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನಿ ಪಕ್ಷ ಸ್ಥಾಪಿಸ್ತಾರಾ ಸಂಸದೆ ಸುಮಲತಾ ಅಂಬರೀಶ್..?