ಲಕ್ನೋ: ವಿವಾಹ ಸಮಯದಲ್ಲಿ ಕುದುರೆ ಸವಾರಿ ಮಾಡದಂತೆ ಸ್ಥಳೀಯರ ಬೆದರಿಕೆ ಹಾಕಿರುವುದಕ್ಕೆ ವರನ ಕುಟುಂಬ ಪೊಲೀಸರ ರಕ್ಷಣೆ ಕೋರಿದ ಘಟನೆ ಉತ್ತರಪ್ರದೇಶದ ಮಹೋಬಾದಲ್ಲಿ ನಡೆದಿದೆ.
ಕಳೆದ ಹಲವಾರು ವರ್ಷಗಳಿಂದ, ನಮ್ಮ ಹಳ್ಳಿಯಲ್ಲಿ ಹಳೆಯ ಸಂಪ್ರದಾಯಗಳ ಪ್ರಕಾರ ಮದುವೆಗಳು ನಡೆಯುತ್ತಿವೆ. ಮದುವೆ ಸಮಯದಲ್ಲಿ ಕುದುರೆ ಸವಾರಿ ಮಾಡುವುದು ಸಂಪ್ರದಾಯವಾಗಿದೆ. ನನ್ನ ಮದುವೆ ಮೆರವಣಿಗೆಗಾಗಿ ನಾನು ಕುದುರೆ ಸವಾರಿ ಮಾಡಲು ಬಯಸುತ್ತೇನೆ ಆದರೆ ಇತರ ಸಮುದಾಯಗಳಿಂದ ಬಂದ ಕೆಲವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವರ ಅಲಕ್ ರಾಮ್ ಹೇಳಿದ್ದಾರೆ. ಇದನ್ನೂ ಓದಿ: ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಐಪಿಎಸ್ ಅಧಿಕಾರಿ
ಮದುವೆ ಸಂದರ್ಭದಲ್ಲಿ ಕುದುರೆ ಸವಾರಿ ಮಾಡದಂತೆ ಸ್ಥಳೀಯರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ವರ ಪೊಲೀಸರಲ್ಲಿ ರಕ್ಷಣೆ ಕೋರಿದ್ದಾರೆ. ಈ ಸಂಬಂದ ತೀವ್ರ ನಿಗಾ ವಹಿಸಿದ್ದೇವೆ. ಆದರೆ ಕುದುರೆ ಸವಾರಿ ಮಾಡುವುದರಿಂದ ಗ್ರಾಮದಲ್ಲಿ ಯಾರಿಗೆ ತೊಂದರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದರೇ ಕೊಲ್ಲುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ ಎಂದು ವರ ಅಲಕ್ ರಾಮ್ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನ ಮಗನ ಮದುವೆ ಜೂನ್ 18 ರಂದು ನಡೆಯಲಿದ್ದು, ಈ ವೇಳೆ ಕುದುರೆ ಸವಾರಿ ಮಾಡಿದರೆ ಗ್ರಾಮಸ್ಥರು ಕೊಲ್ಲುವ ಬೆದರಿಕೆ ಹಾಕಿರುವುದರಿಂದ ಪೊಲೀಸರ ರಕ್ಷಣೆ ಕೋರುತ್ತಿರುವುದಾಗಿ ರಾಮ್ ತಂದೆ ಗಯಾದಿನ್ ತಿಳಿಸಿದ್ದಾರೆ.