ದಿಸ್ಪೂರ್: ಪ್ರತಿಯೊಂದು ಜೀವಿಗೂ ನೀರು ಬಹಳ ಮುಖ್ಯ. ಏನಿಲ್ಲವಾದರೂ ನೀರಿಲ್ಲದೆ ಮನುಷ್ಯ ಬದುಕಲಾರ. ನೀರು ಕೆಲವೊಮ್ಮ ಹಸಿವನ್ನು ಕೂಡ ನೀಗಿಸುತ್ತದೆ. ನೀರಿಲ್ಲದೆ ಏನು ಕೂಡ ಇಲ್ಲ. ಪ್ರತಿಯೊಂದು ಕೆಲಸಕ್ಕೂ ನೀರು ಬೇಕೆ ಬೇಕು. ಅಂತಹ ನೀರಿನ ಮಹತ್ವ ತಿಳಿದ ಮಹಿಳೆಯೊಬ್ಬಳ ವಿಡಿಯೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ.
Advertisement
ಅಸ್ಸಾಂ ಮಹಿಳೆಯೊಬ್ಬಳು ವಾಟರ್ ಪೈಪ್‍ನ ಮೂಲಕ ಕೊಳಾಯಿಯಲ್ಲಿ ನೀರು ಬರುವುದನ್ನು ನೋಡಿ ಕೈ ಮುಗಿದು ಬೇಡಿಕೊಂಡಿರುವ ವಿಡಿಯೋವೊಂದು ಸೋಶಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿನ ಜನರ ಮನಗೆಲ್ಲುವ ಮೂಲಕ ಎಲ್ಲರ ಪ್ರೀತಿ ಗಳಿಸಿದೆ.
Advertisement
60 ವರ್ಷದ ಮಹಿಳೆಯೊಬ್ಬಳು ತನ್ನ ಮನೆಗೆ ಮೊದಲ ಬಾರಿಗೆ ಪೈಪ್ ಮೂಲಕ ಕುಡಿಯುವ ನೀರು ಬರುವುದನ್ನು ನೋಡಿ ಇಂದು ಕೊನೆಗೂ ದೇವರಿಗೆ ನನ್ನ ಪ್ರಾರ್ಥನೆ ಕೇಳಿಸಿದೆ ಎಂಬಂತೆ ತಲೆ ತಗ್ಗಿಸಿ ತನ್ನ ಎರಡು ಕೈಗಳನ್ನು ಜೋಡಿಸಿ ಬೇಡಿಕೊಂಡಿದ್ದಾಳೆ.
Advertisement
Advertisement
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜಲಶಕ್ತಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಅಸ್ಸಾಂನ ಈ ಸಹೋದರಿಯು ನಲ್ಲಿಯಲ್ಲಿ ನೀರು ಬರುತ್ತಿರುವುದನ್ನು ಕಂಡು ತಲೆ ಬಾಗಿಸಿ ತನ್ನ ಎರಡು ಕೈಗಳನ್ನು ಜೋಡಿಸಿ ದೇವರಿಗೆ ಧನ್ಯವಾದ ಸಲ್ಲಿಸಿದ್ದಾಳೆ. ಸ್ವಾತಂತ್ರದ ನಂತರವೂ ಜನ ನೀರಿನ ಸಮಸ್ಯೆಯನ್ನು ಪರದಾಡುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಜನರು ಎದುರಿಸುತ್ತಿರುವ ಮೂಲಭೂತ ಅಗತ್ಯಗಳನ್ನು ಒದಗಿಸುವ ಮೂಲಕ ಜನರ ಜೀವನವನ್ನು ಬದಲಾಯಿಸಿದ್ದಾರೆ ಎಂದು ಹೇಳಿದ್ದಾರೆ.
View this post on Instagram
ಅಲ್ಲದೆ ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಭಾರತೀಯ ಜನತಾ ಪಕ್ಷ ಜೀವನಧಾರವಾಗಿರುವ ಕುಡಿಯುವ ನೀರು ಕೊನೆಗೂ ಆಕೆಯ ಮನೆಗೆ ತಲುಪಿದೆ ಎಂದು ಕ್ಯಾಪ್ಷನ್ ಹಾಕಿದ್ದಾರೆ.