ಹಾಸನ: ಕುಡಿದ ಅಮಲಿನಲ್ಲಿ ಯುವಕನೊಬ್ಬನನ್ನು ಥಳಿಸಿ ಕೊಲೆ ಮಾಡಿದ್ದ ಯುವಕರ ತಂಡವನ್ನು ಹಾಸನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 16 ರಂದು ಹಾಸನದ ರಿಂಗ್ ರಸ್ತೆಯಲ್ಲಿರುವ ಬಾರ್ ಒಂದರ ಮುಂದೆ ಯುವಕರ ಎರಡು ತಂಡದ ನಡುವೆ ಗಲಾಟೆಯಾಗಿತ್ತು. ಕುಡಿದ ಅಮಲಿನಲ್ಲಿ ಎರಡು ತಂಡದ ನಡುವೆ ನಡೆದ ಗಲಾಟೆಯಲ್ಲಿ ಪುನೀತ್ ಎಂಬ ಯುವಕ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದ.
ಓರ್ವ ಯುವಕ ಸಾವನ್ನಪ್ಪಿದ ವಿಷಯ ತಿಳಿದು ಹಲ್ಲೆ ಮಾಡಿದ್ದ ಯುವಕರು ತಲೆ ಮರೆಸಿಕೊಂಡಿದ್ದರು. ಸಾರ್ವಜನಿಕ ಸ್ಥಳದಲ್ಲಿ ನಡೆದಿದ್ದ ಈ ಗಲಾಟೆ ಹಾಸನ ಜನರನ್ನು ಬೆಚ್ಚಿ ಬೀಳಿಸಿತ್ತು. ಈ ಸಂಬಂಧ ಆರೋಪಿಗಳ ಹುಡುಕಾಟದಲ್ಲಿ ಹಾಸನ ಪೊಲೀಸರು ತೊಡಗಿದ್ದರು.
ಇದೀಗ ಆರು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.