ಮಂಗಳೂರು: ಬಡಿಗೆಯಿಂದ ಹೊಡೆದು ತಂದೆಯನ್ನೇ ಮಗ ಬರ್ಬರವಾಗಿ ಕೊಲೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಬಳಿಯ ಮುಂದೊಟ್ಟು ಎಂಬಲ್ಲಿ ನಡೆದಿದೆ.
ಕೊಲೆಯಾದ ತಂದೆಯನ್ನು ಶ್ರೀಧರ್ ಎಂದು ಗುರುತಿಸಲಾಗಿದೆ. ಇವರನ್ನು ಸ್ವಂತ ಮಗ ಹರೀಶ್ ಹತ್ಯೆ ಮಾಡಿದ್ದಾನೆ. ಕುಡಿದು ಬಂದು ತಂದೆಯೊಂದಿಗೆ ಗಲಾಟೆ ಮಾಡಿದ ಹರೀಶ್, ಕುಡಿತದ ಅಮಲಿನಲ್ಲೇ ತಂದೆಯನ್ನು ಕೊಂದಿದ್ದಾನೆ.
ಮೃತ ಶ್ರೀಧರ್ ಗೆ ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣುಮಗಳು ಇದ್ದಾಳೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.