ಜೈಪುರ: 35 ವರ್ಷದ ವ್ಯಕ್ತಿಯೊರ್ವ ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಬೆಲ್ಟಿನಿಂದ ಹೊಡೆದು ಹತ್ಯೆಗೈಯ್ದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಘಟನೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಪೊಲೀಸರು, ಪತಿ ರಾಕೇಶ್ ಮೀನಾ ಕುಡಿದ ಮತ್ತಿನಲ್ಲಿ ಪತ್ನಿ ವಿಮ್ಲಾಬಾಯಿ(31)ಗೆ ಹಿಗ್ಗಾಮುಗ್ಗಾ ಚರ್ಮದ ಬೆಲ್ಟ್‍ನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಭಾನುವಾರ ಮೃತಪಟ್ಟಿರುದಾಗಿ ತಿಳಿಸಿದ್ದಾರೆ.
ಪ್ರಕರಣ ಸಂಬಂಧಿಸಿದಂತೆ ಮಹಿಳೆಯ ಪೋಷಕರು ಆರೋಪಿ ವಿರುದ್ಧ ದೂರು ದಾಖಲಿಸಿದ್ದು, ಇದೀಗ ಪೊಲೀಸರು ಆರೋಪಿ ರಾಕೇಶ್ ಮೀನಾರನ್ನು ಬಂಧಿಸಿದ್ದಾರೆ.