ಲಕ್ನೋ: ಕೋವಿಡ್-19 ಭೀತಿಯಿಂದ ಈ ಬಾರಿ ದೇಶಾದ್ಯಂತ ಹೋಳಿ ಹಬ್ಬವನ್ನು ಅಷ್ಟಾಗಿ ಜನರು ಆಚರಿಸಲಾಗಲಿಲ್ಲ. ಆದರೆ ಉತ್ತರ ಪ್ರದೇಶದ ಪ್ರತಾಪ್‍ಗಢದಲ್ಲಿ ಹೋಳಿಹಬ್ಬದಂದು ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ 50 ಅಡಿ ಎತ್ತರದ ವಾಟರ್ ಟ್ಯಾಂಕ್ ಏರಿ ಡ್ಯಾನ್ಸ್ ಮಾಡಿದ್ದಾನೆ.
ಸೋಮವಾರ ಮಧ್ಯಾಹ್ನ ವ್ಯಕ್ತಿಯೋರ್ವ ಮದ್ಯ ಸೇವಿಸಿ, ನಡೆಯಲು ಸಾಧ್ಯವಾಗದಿದ್ದರೂ ಸಹ ಮೆಟ್ಟಿಲುಗಳನ್ನು ಹತ್ತಿ ವಾಟರ್ ಟ್ಯಾಂಕ್ ಮೇಲಕ್ಕೆ ತಲುಪಿದ್ದಾನೆ.
ಬಳಿಕ ತನ್ನ ಮೊಬೈಲ್‍ನಲ್ಲಿ ಹಾಡನ್ನು ಪ್ಲೇ ಮಾಡಿ ಕೊಂಚವೂ ಭಯವಿಲ್ಲದೇ ನೃತ್ಯ ಮಾಡಲು ಆರಂಭಿಸಿದ್ದಾನೆ. ಇದನ್ನು ಕಂಡು ಭಯಗೊಂಡ ದಾರಿ ಹೋಕರು ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ತಮ್ಮ ಮೊಬೈಲ್‍ನಲ್ಲಿ ವೀಡಿಯೋವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಂತರ ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿ ಹಲವಾರು ಹರಸಾಹಸ ಪಟ್ಟು ವ್ಯಕ್ತಿಯನ್ನು ರಕ್ಷಿಸಿದರು. ಅದೃಷ್ಟವಶತ್ ಜರುಗಬೇಕಿದ್ದ ಅನಾಹುತವನ್ನು ತಪ್ಪಿಸಿದರು.