-ಪ್ರಿಸನ್ ಕಾಲ್ ಮೂಲಕ ಯೋಗಕ್ಷೇಮ ವಿಚಾರಣೆ
ಹುಬ್ಬಳ್ಳಿ: ಕುಟುಂಬಸ್ಥರೊಂದಿಗೆ ಮಾತನಾಡಲು ಕೈದಿಗಳಿಗೆ ಮಾತನಾಡಲು ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳ ಹಾಗೂ ಅಪರಾಧಿಗಳ ಕುಟುಂಬದ ಸದಸ್ಯರಲ್ಲಿರುವ ಆತಂಕವನ್ನು ದೂರ ಮಾಡಲು ಹಾಗೂ ಕುಟುಂಬದ ಸದಸ್ಯರು ಕಾರಾಗೃಹಕ್ಕೆ ಬರದೇ ಮನೆಯಲ್ಲಿಯೇ ಇದ್ದು, ಯೋಗಕ್ಷೇಮ ವಿಚಾರಿಸಲು ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ವಿಶೇಷ ಸೇವೆಯನ್ನು ನೀಡಲಾಗಿದೆ.
Advertisement
ಇಲ್ಲಿಯ ವಿಶ್ವೇಶ್ವರ ನಗರದ ಉಪ ಕಾರಾಗೃಹದಲ್ಲಿ `ಪ್ರಿಸನ್ ಕಾಲ್ ಸಿಸ್ಟಮ್’ ಅಳವಡಿಸುವ ಮೂಲಕ ಕೈದಿಗಳಿಗೆ (ವಿಚಾರಣಾಧೀನ ಅಥವಾ ಅಪರಾಧಿ) ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿರಲು ಅವಕಾಶ ಕಲ್ಪಿಸಲಾಗಿದೆ.
Advertisement
Advertisement
ಕೈದಿಗಳು ನಿಯಮ ಉಲ್ಲಂಘಿಸದೆ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಅಥವಾ ಕೋರ್ಟ್ ವ್ಯವಹಾರಕ್ಕೆ ಸಂಬಂಧಿಸಿ ವಕೀಲರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಕಾರಾಗೃಹದಿಂದಲೇ ದೂರವಾಣಿ ಮೂಲಕ ಸೌಲಭ್ಯ ಕಲ್ಪಿಸಿಕೊಡುವ ವ್ಯವಸ್ಥೆ ಇದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೈದಿಗಳ ಯೋಗಕ್ಷೇಮವನ್ನು ಕುಟುಂಬಸ್ಥರಿಗೆ ನೀಡಲು ಇದೊಂದು ಸಂಪರ್ಕ ಕೊಂಡಿಯಾಗಿದೆ.
Advertisement
ಕಾರಾಗೃಹದಿಂದ ದೂರವಾಣಿ ಬಾಕ್ಸ್ ಗೆ ಬಿಎಸ್‍ಎನ್‍ಎಲ್ ಸಂಪರ್ಕ ಕಲ್ಪಿಸಲಾಗಿದ್ದು, ಬೆಂಗಳೂರಿನ ಕಿಯೋನಿಕ್ಸ್ ಸಂಸ್ಥೆ ಅದನ್ನು ಅಳವಡಿಸಿದೆ. ಕಾರಾಗೃಹದಲ್ಲಿ ಸದ್ಯ ಒಂದು ದೂರವಾಣಿ ಬಾಕ್ಸ್ ಅನ್ನು ಮಾತ್ರ ಅಳವಡಿಸಲಾಗಿದ್ದು, ಕೈದಿಗಳು ಹೆಸರನ್ನು ನೋಂದಾಯಿಸಿಕೊಂಡು, ಬೆರಳಚ್ಚು ನೀಡಬೇಕು. ಮಾತನಾಡಲು ಬಯಸುವ ಮೂವರು ವ್ಯಕ್ತಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆ ನೀಡಬೇಕು. ಈ ಎಲ್ಲ ನಂಬರ್‍ಗಳನ್ನು ಅಧಿಕಾರಿಗಳು ದೃಢೀಕರಿಸಿ `ಪ್ರಿಸನ್ ಕಾಲ್ ಸಿಸ್ಟಮ್’ಗೆ ಸೇರಿಸುತ್ತಾರೆ. ನಂತರ ಕೈದಿಗಳು ವಾರದಲ್ಲಿ 12 ನಿಮಿಷ ಮಾತ್ರ ತಾವು ನೀಡಿದ ಯಾವುದೇ ನಂಬರಿಗೆ ಕರೆ ಮಾಡಿ ಮಾತನಾಡಬಹುದು. ಅವಧಿ ಮುಗಿದ ನಂತರ ಸ್ವಯಂಚಾಲಿತವಾಗಿ ಸಂಪರ್ಕ ಕಡಿತಗೊಳ್ಳುತ್ತದೆ.
ಇನ್ನೂ ಪ್ರತಿಯೊಂದು ಪ್ರಿಸೆನ್ಸ್ ಕಾಲ್ ಮೇಲೆ ನಿಗಾ ಇಡಲಾಗಿದ್ದು, ಕರೆಯ ಹಣವನ್ನು ಕೈದಿಗಳ ಸಂಬಂಧಿಕರು ಎಂಒ ಮೂಲಕ ಪಾವತಿಸಬೇಕಿದೆ. ಅಲ್ಲದೇ ಎಲ್ಲ ಅಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಯಾವುದೇ ರೀತಿಯ ಅವ್ಯವಸ್ಥೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.