ಬೆಂಗಳೂರು: ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್ ದೂದ್‍ಪೇಡ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳಿನಿಂದ ತಮ್ಮ ಕುಟುಂಬದವರ ಜೊತೆ ಮನೆಯಲ್ಲಿಯೇ ಕಾಲಕಳೆದಿದ್ದರು. ಇದೀಗ ಲಾಕ್‍ಡೌನ್ ಸಡಿಲಿಕೆಯ ನಂತರ ಕುಟುಂಬದವರ ಜೊತೆ ಔಟಿಂಗ್ ಹೋಗಿದ್ದಾರೆ.
ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕರ್ನಾಟಕದ ಸುಂದರ ತಾಣಗಳಲ್ಲಿ ಒಂದಾಗಿರುವ ಕೂರ್ಗ್ ಗೆ ಕುಟುಂಬದವರ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. ತಾವು ಪ್ರವಾಸಕ್ಕೆ ಹೋಗಿರುವ ಫೋಟೋಗಳನ್ನು ನಟಿ ಐಂದ್ರಿತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕೊರೊನಾ ಆತಂಕದ ನಡುವೆಯೂ ಹೊರಬಂದು ಪ್ರಕೃತಿ ಸೌಂದರ್ಯವನ್ನು ದಿಗಂತ್ ಮತ್ತು ಐಂದ್ರಿತಾ ರೇ ಎಂಜಾಯ್ ಮಾಡುತ್ತಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ಕ್ಯಾನ್ಸಲ್ ಆಗಿತ್ತು. ಹೀಗಾಗಿ ಇಷ್ಟು ದಿನಗಳನ್ನು ಮನೆಯಲ್ಲಿಯೇ ಇದ್ದರು. ಈಗ ಮನೆಯಿಂದ ಹೊರ ಬಂದು ಕುಟುಂಬ ಮತ್ತು ಪ್ರಕೃತಿಯ ಸೌಂದರ್ಯದ ಮಧ್ಯೆ ರಿಲ್ಯಾಕ್ಸ್ ಮಾಡುತ್ತಿದ್ದಾರೆ.
https://www.instagram.com/p/CBxbnALFpv4/?igshid=ybw4dnn7bw2b
ಪೋಷಕರು ಕೂಡ ಈ ಟ್ರಿಪ್‍ನಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಎಂದರೆ ಈ ಜೋಡಿ ತಮ್ಮ ಟ್ರಿಪ್‍ಗೆ ಎರಡು ನಾಯಿಗಳನ್ನು ಕೂಡ ಕರೆದುಕೊಂಡು ಹೋಗಿದ್ದಾರೆ. ಐಂದ್ರಿತಾ ಮತ್ತು ದಿಗಂತ್‍ಗೆ ಟ್ರಿಪ್, ಟ್ರಕ್ಕಿಂಗ್ ಎಂದರೆ ತುಂಬಾ ಇಷ್ಟ. ಆದ್ದರಿಂದ ಈ ದಂಪತಿ ಆಗಾಗ ಜಾಲಿ ಟ್ರಿಪ್ ಹೋಗುತ್ತಿದ್ದರು. ಸದ್ಯಕ್ಕೆ ಲಾಕ್‍ಡೌನ್ ಸಡಿಲಿಕೆ ಆಗುತ್ತಿದ್ದಂತೆ ಪ್ರಕೃತಿ ಸೌಂದರ್ಯ ನೋಡಲು ಹೋಗಿದ್ದಾರೆ.
ದಿಗಂತ್ ಹಾಗೂ ಐಂದ್ರಿತಾ ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಮೀಪವಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್ ನಲ್ಲಿ 2018 ಡಿಸೆಂಬರಿನಲ್ಲಿ ಈ ಜೋಡಿ ವಿವಾಹವಾಗಿದ್ದಾರೆ.
https://www.instagram.com/p/CB3T6AEFkEz/?igshid=paozvkq63lrx