– ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು ಬಹಿರಂಗ
– ಬಂಧಿತನಿಂದ ಎರಡು ಐಇಡಿ, ಬಂದೂಕು ವಶ
ನವದೆಹಲಿ: ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಐಸಿಸ್ ಶಂಕಿತ ಆಪರೇಟರ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ರಾತ್ರಿ ಸಣ್ಣ ಪ್ರಮಾಣದ ಗುಂಡಿನ ಚಕಮಕಿ ಬಳಿಕ ಪೊಲೀಸರು ಉಗ್ರನನ್ನು ಹಿಡಿದಿದ್ದಾರೆ.
ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಆರೋಪಿ ಅಬು ಯುಸುಫ್‍ನನ್ನು ಬಂಧಿಸಿದ್ದು, ಎರಡು ಸುಧಾರಿತ ಸ್ಫೋಟಕ(ಐಇಡಿ)ಗಳು ಹಾಗೂ ಒಂದು ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಈತ ಒಂಟಿಯಾಗಿ ದಾಳಿ ನಡೆಸಲು ಸಂಚು ರೂಪಿಸಿದ್ದನು ಎಂದು ದೆಹಲಿಯ ವಿಶೇಷ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಐಇಡಿಗಳನ್ನು ಕುಕ್ಕರ್ ನಲ್ಲಿ ಅಡಿಗಿಸಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
The IEDs were found in a pressure cooker; the weight yet not clear, it will be confirmed after the investigation: Delhi Police
One ISIS operative was arrested from the site with Improvised Explosive Devices (IEDs), earlier today by Delhi Police Special Cell.
— ANI (@ANI) August 22, 2020
Advertisement
ದೆಹಲಿ ಡಿಸಿಪಿ ಪ್ರಮೋದ್ ಸಿಂಗ್ ಕುಶ್ವಾಹ್ ಈ ಕುರಿತು ಮಾಹಿತಿ ನೀಡಿದ್ದು, ಐಇಡಿಗಳನ್ನು ಹೊಂದಿದ್ದ ಓರ್ವ ಐಸಿಸ್ ಉಗ್ರನನ್ನು ದೆಹಲಿ ವಿಶೇಷ ಪೊಲೀಸ್ ಪಡೆ ಬಂಧಿಸಿದೆ. ಧೌಲಾ ಕುವಾನ್ ಬಳಿ ಘಟನೆ ನಡೆದಿದ್ದು, ಸಣ್ಣ ಪ್ರಮಾಣದ ಗುಂಡಿನ ಚಕಮಕಿ ಬಳಿಕ ಉಗ್ರನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಶಂಕಿತ ಉಗ್ರ ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದು, ಏಕಾಂಗಿಯಾಗಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
#WATCH Delhi: National Security Guard (NSG) commandos carry out search operation near Buddha Jayanti Park in Ridge Road area.
One ISIS operative was arrested from the site with Improvised Explosive Devices (IEDs), earlier today by Delhi Police Special Cell. pic.twitter.com/q1uodH5cYJ
— ANI (@ANI) August 22, 2020
ಇತ್ತೀಚೆಗಷ್ಟೇ ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ವೈದ್ಯನನ್ನು ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಬಂಧಿಸಿತ್ತು. ಇದಾದ ಬಳಿಕ ಇದೀಗ ದೆಹಲಿಯಲ್ಲಿ ಸಹ ಓರ್ವ ಉಗ್ರನನ್ನು ಬಂಧಿಸಲಾಗಿದೆ. ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ಬೆಂಗಳೂರಿನ ವೈದ್ಯ ರಹ್ಮಾನ್(28) ನೇತ್ರ ತಜ್ಞನಾಗಿ ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ.