ಉಡುಪಿ: ದೇಶಾದ್ಯಂತ ಸಮರೋಪಾದಿಯಲ್ಲಿ ಹೆದ್ದಾರಿಗಳ ನಿರ್ಮಾಣ ನಡೆಯುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿದಿನ 12 ಕಿಲೋಮೀಟರ್ ನಷ್ಟು ದೇಶದಲ್ಲಿ ರಸ್ತೆ ನಿರ್ಮಾಣ ಆಗುತ್ತಿತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರತಿದಿನ 30 ಕಿಲೋಮೀಟರ್ ನಷ್ಟು ಪ್ರತಿದಿನ ಹೆದ್ದಾರಿಯ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
Advertisement
ಕುಂದಾಪುರ ಹೊನ್ನಾವರ ಚತುಷ್ಪತ ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಷ್ಟ್ರೀಯ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಿದರು. ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನೇರಪ್ರಸಾರ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯ ಸಾರ್ವಕಾಲಿಕ ದಾಖಲೆ ಎಂದರು.
Advertisement
ಆರಂಭದಿಂದಲೂ ಕರ್ನಾಟಕಕ್ಕೆ ನಿತಿನ್ ಗಡ್ಕರಿ ದೊಡ್ಡ ಕೊಡುಗೆಯನ್ನು ಕೊಡುತ್ತಿದ್ದಾರೆ. ಇಂದು ದೇಶಾದ್ಯಂತ 33 ರಾಷ್ಟ್ರೀಯ ಹೆದ್ದಾರಿಗಳನ್ನು ದೇಶಕ್ಕೆ ಅರ್ಪಿಸುವ ಕೆಲಸ ಆಗುತ್ತಿದೆ. ಹಲವಾರು ರಸ್ತೆಗಳ ಭೂಮಿಪೂಜೆಯನ್ನು ಕೂಡ ಗಡ್ಕರಿಯವರು ವರ್ಚುವಲ್ ಮೂಲಕ ನೆರವೇರಿಸಿದ್ದಾರೆ.
Advertisement
Advertisement
ಕುಂದಾಪುರದಿಂದ ಹೊನ್ನಾವರ ತನಕ 2,639 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದ್ದೇವೆ. ತೀರ್ಥಹಳ್ಳಿ ಶೃಂಗೇರಿ ರಸ್ತೆ 96 ಕೋಟಿ, ಚಾರ್ಮಾಡಿ ಘಾಟ್ ರಸ್ತೆ ತಡೆಗೋಡೆಗೆ 19 ಕೋಟಿ ಶಿಲಾನ್ಯಾಸ ಆಗಿದೆ. ಎಲ್ಲಾ ಕಾಮಗಾರಿ ಶೀಘ್ರ ಮುಗಿಯಲಿದೆ ಎಂದು ಹೇಳಿದರು.