ಲಂಡನ್: ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಾಕಷ್ಟು ಅದ್ಭುತಗಳು ನಡೆಯುತ್ತಿರುತ್ತವೆ. ಆದರೆ ಹಿಂದೆಂದೂ ನೋಡಿದರದಂತೆ ವಿಕೆಟ್ ಕೀಪರ್ ಕೈಯಲ್ಲಿ ಚೆಂಡಿದ್ದರು, ಬ್ಯಾಟ್ಸ್ ಮನ್ 2 ರನ್ ಓಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುರೋಪಿಯನ್ ಕ್ರಿಕೆಟ್ ಟೂರ್ನಿಯಲ್ಲಿ ಘಟನೆ ನಡೆದಿದ್ದು, ವಿಕೆಟ್ ಕೀಪರ್ ಕೈಯಲ್ಲಿ ಚೆಂಡಿದ್ದರು ಬ್ಯಾಟ್ಸ್ ಮನ್ 2 ಗಳಿಸಲು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.
ಯುರೋಪಿಯನ್ ಕ್ರಿಕೆಟ್ ಲೀಗ್ ಭಾಗವಾಗಿ ಬಾರ್ಸಿಲೋನಾ ಸಿಸಿ ಮತ್ತು ಕ್ಯಾಂಟಲೂನ್ಯ ಟೈಗರ್ಸ್ ನಡುವೆ ಟಿ10 ಪಂದ್ಯ ನಡೆದಿತ್ತು. ಬಾರ್ಸಿಲೋನಾ ತಂಡಕ್ಕೆ ಗೆಲ್ಲಲು ಅಂತಿಮ ಎಸೆತದಲ್ಲಿ ಮೂರು ರನ್ ಗಳ ಅಗತ್ಯವಿತ್ತು. ಆದರೆ ಅಂತಿಮ ಎಸೆತವನ್ನು ಟಚ್ ಮಾಡಲು ವಿಫಲರಾದ ಸಂದರ್ಭದಲ್ಲಿ ಚೆಂಡು ನೇರ ವಿಕೆಟ್ ಕೀಪರ್ ಕೈ ಸೇರಿತ್ತು. ಆದರೆ ಈ ಹಂತದಲ್ಲಿ ಬ್ಯಾಟ್ಸ್ ಮನ್ ಒಂದು ರನ್ ಗಳಿಸಿದ್ದರು. ಆದರೆ ಚೆಂಡು ವಿಕೆಟ್ ಕೀಪರ್ ಕೈಯಲ್ಲಿದ್ದರು 2ನೇ ರನ್ ಓಡಲು ಸಿದ್ಧರಾದ ಬ್ಯಾಟ್ಸ್ ಮನ್ ರನ್ ಮಾಡಿದರು, ಆದರೆ ವಿಕೆಟ್ ಕೀಪರ್ ರನೌಟ್ ಮಾಡುವ ಬದಲು ಬೌಲರ್ ಬಳಿ ರನೌಟ್ ಮಾಡಲು ಹೇಳಿ ಚೆಂಡು ಎಸೆದಿದ್ದರು. ಆದರೆ ಬೌಲರ್ ರನೌಟ್ ಮಾಡಲು ವಿಫಲರಾದರು. ಇದರೊಂದಿಗೆ ಅಂತಿಮ ಎಸೆತದಲ್ಲಿ 2 ಗಳಿಸಿದ ಕಾರಣ ಪಂದ್ಯ ಟೈ ಆಗಿತ್ತು.
SCENES! 2 to tie off last delivery, ball in wicket keeper hands and need another run. WHAT TO DO?? ???????????? pic.twitter.com/xFQuaUOreu
— European Cricket (@EuropeanCricket) October 28, 2020
ಪಂದ್ಯ ಟೈ ಆದ ಕಾರಣ ನಿಯಮಗಳಂತೆ ಫಲಿತಾಂಶಕ್ಕಾಗಿ ಗೋಲ್ಡನ್ ಬಾಲ್ ರೂಲ್ ಜಾರಿ ಮಾಡಿದ್ದರು. ಇದರಂತೆ ಗೋಲ್ಡನ್ ಬಾಲ್‍ನಲ್ಲಿ ಬಾರ್ಸಿಲೋನಾ ತಂಡ ಕೇವಲ 1 ರನ್ ಗಳಿಸಿದ ಕಾರಣ ಕ್ಯಾಂಟಲೂನ್ಯ ಟೈಗರ್ಸ್ ತಂಡ ಗಲುವು ಪಡೆಯಿತು. ಯುರೋಪಿನ್ ಟೂರ್ನಿಯಲ್ಲಿ ವಿಜೇತರನ್ನು ಇದೇ ನಿಯಮದ ಅಡಿ ಆಯ್ಕೆ ಮಾಡಲಾಗುತ್ತದೆ. ಪಂದ್ಯ ಟೈ ಆದ ಸಂದರ್ಭದಲ್ಲಿ ತಂಡಗಳಿಗೆ ಗೋಲ್ಡನ್ ಬಾಲ್ ಅವಕಾಶ ನೀಡಲಾಗುತ್ತದೆ. ಈ ಎಸೆತದಲ್ಲಿ ಯಾವ ತಂಡ 2 ರನ್ ಗಳಿಗಿಂತ ಹೆಚ್ಚು ರನ್ ಗಳಿಸುತ್ತೋ ಆ ತಂಡವನ್ನು ಜಯಶಾಲಿ ಎಂದು ನಿರ್ಧರಿಸಲಾಗುತ್ತದೆ.
GOLDEN BALL ❌
NUMBER ???? IN EUROPEAN CRICKET SERIES HISTORY on a day of drama in Barcelona ???????????? pic.twitter.com/RlDh6HaxkN
— European Cricket (@EuropeanCricket) October 28, 2020