ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಲಾಕ್‍ಡೌನ್ ವೇಳೆ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ದರ್ಶನ್ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ಲಾಕ್‍ಡೌನ್ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. “ಕೊರೊನಾ ಲಾಕ್‍ಡೌನ್‍ನಿಂದ ಸಣ್ಣ ಉದ್ಯಮಗಳು ದೊಡ್ಡ ಸಂಕಷ್ಟವನ್ನು ಅನುಭವಿಸುತ್ತಿವೆ. ಲಾಕ್‍ಡೌನ್ ಮುಗಿದ ನಂತರ ಸ್ಥಳೀಯ ಮಾರಾಟಗಾರರಿಂದ ತರಕಾರಿಗಳನ್ನು ಖರೀದಿಸಿ. ಸ್ಟಾರ್ ಹೋಟೆಲ್‍ಗೆ ಹೋಗಿ ಕಾಫಿ ಕುಡಿಯುವ ಬದಲು ನಿಮ್ಮ ಮನೆಯ ಹತ್ತಿರ ಇವರ ಅಂಗಡಿಗೆ ಹೋಗಿ ಕಾಫಿ ಕುಡಿಯಿರಿ. ಅಮೆಜಾನ್ ಬದಲಿಗೆ ಸ್ಥಳೀಯ ಕಿರಾಣಿ ಅಂಗಡಿಗಳಲ್ಲಿ ದಿನಸಿ ವಸ್ತುಗಳನ್ನು ಖರೀದಿಸಿ. ಈ ಕೊರೊನಾ ಮಹಾಮಾರಿ ವೇಳೆ ಸಣ್ಣ ವ್ಯಾಪಾರಿಗಳಿಗೆ ನಿಮ್ಮ ಸಹಾಯದ ಅಗತ್ಯವಿದೆ’ ಎಂದು ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
“ಅಮೆಜಾನ್, ಪಿಜ್ಜಾ, ಕೆಎಫ್‍ಸಿ, ಮ್ಯಾಕ್ ಡೊನಾಲ್ಡ್ ಲಾಕ್‍ಡೌನ್ ಇದ್ದರೂ ಬದುಕುತ್ತವೆ. ಆದರೆ ಸಣ್ಣ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಕ್ಕಪಕ್ಕದ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ. ಇದರಿಂದ ಅವರ ಬದುಕಿಗೆ ಸಹಾಯ ಆಗತ್ತೆ” ಅಂತ ವಿಜಯಲಕ್ಷ್ಮೀ ಟ್ವೀಟ್ ಮಾಡಿದ್ದಾರೆ.
Advertisement
— Vijayalakshmi darshan (@vijayaananth2) May 21, 2020
Advertisement
ಮೇ 19 ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಯ ವಿವಾಹ ವಾರ್ಷಿಕೋತ್ಸವ ಇತ್ತು. ಅಂದು ಡಿ ಬಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರಿದ್ದಾರೆ. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಪರಸ್ಪರ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಡಿ ಬಾಸ್ ಹಾಗೂ ವಿಜಯಲಕ್ಷ್ಮಿಯವರ ವಿವಾಹ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಮಂಜುನಾಥ ಸ್ವಾಮಿಯ ದೇವಸ್ಥಾನದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಿನಿ ತಾರೆಯರ ಸಮ್ಮುಖದಲ್ಲಿ ನಡೆದಿತ್ತು.