ಮುಂಬೈ: ಬಾಲಿವುಡ್ ಹಿರಿಯ ನಟಿ, ಬಿಜೆಪಿ ಸಂಸದೆ ಕಿರಣ್ ಖೇರ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪತ್ನಿ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿರುವ ಹಿರಿಯ ನಟ ಅನುಪಮ್ ಖೇರ್ ಭಾವನಾತ್ಮಕವಾಗಿ ಕೆಲ ಸಾಲುಗಳನ್ನ ಬರೆದುಕೊಂಡಿದ್ದಾರೆ.
ಪತ್ನಿ ಆರೋಗ್ಯದ ಕುರಿತು ಕೆಲ ಸುದ್ದಿಗಳು ಹರಿದಾಡುತ್ತಿವೆ. ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಈ ಪೋಸ್ಟ್ ಮಾಡುತ್ತಿದ್ದೇನೆ. ಪತ್ನಿ ಕಿರಣ್ ಖೇರ್, ಮಲ್ಟಿಪಲ್ ಮೈಲೋವನಿಂದ ಬಳಲುತ್ತಿದ್ದರು. ಇಂದು ಒಂದು ರೀತಿ ಬ್ಲಡ್ ಕ್ಯಾನ್ಸರ್. ಸದ್ಯ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಿರಣ್ ತುಂಬಾ ಧೈರ್ಯಶಾಲಿ. ಹಾಗಾಗಿ ಈ ಎಲ್ಲ ಕಷ್ಟಗಳಿಂದ ಹೊರ ಬರುತ್ತಾರೆ.
ಹಿರಿಯ ತಜ್ಞರು ಕಿರಣ್ ಅವರಿಗೆ ಚಿಕಿತ್ಸೆ ನೀಡುತ್ತಿರೋದು ಸಂತಸದ ವಿಚಾರ. ಕಿರಣ್ ಅವರಲ್ಲಿ ಹೋರಾಡುವ ಗುಣವಿದ್ದು, ಇದೆಲ್ಲವನ್ನ ಎದುರಿಸುವ ಸಾಮಾರ್ಥ್ಯ ಅವರಲ್ಲಿದೆ. ಪ್ರೀತಿಯಿಂದ ಕಾಣುವ ಗುಣದಿಂದಲೇ ಕಿರಣ್ ಎಲ್ಲರಿಗೂ ಅಚ್ಚುಮೆಚ್ಚು. ನಿಮ್ಮ ಪ್ರೀತಿ, ಹಾರೈಕೆ ಮತ್ತು ಪ್ರಾರ್ಥನೆ ಅವರೊಂದಿಗರಿಲಿ ಎಂದು ಅನುಪಮ್ ಕೇರ್ ಮನವಿ ಮಾಡಿಕೊಂಡಿದ್ದಾರೆ.
???? pic.twitter.com/3C0dcWwch4
— Anupam Kher (@AnupamPKher) April 1, 2021
ವೈದ್ಯರ ಚಿಕಿತ್ಸೆಗೆ ಕಿರಣ್ ಸ್ಪಂದಿಸುತ್ತಿದ್ದು, ಶೀಘ್ರವೇ ಗುಣಮುಖರಾಗಲಿದ್ದಾರೆ. ಅಭಿಮಾನಿಗಳು, ಸಹೋದ್ಯೋಗಿಗಳು, ಆಪ್ತರ ಕಾಳಜಿಗೆ ಕಿರಣ್ ಅವರ ಪರವಾಗಿ ಅನುಪಮ್ ಖೇರ್ ಧನ್ಯವಾದ ಸಲ್ಲಿಸಿದ್ದಾರೆ.