– 27ನೇ ವಯಸ್ಸಿಗೆ ಸಾವನ್ನಪ್ಪಿದ ಮಿಶ್ತಿ ಮುಖರ್ಜಿ
ಬೆಂಗಳೂರು: ಎರಡೂ ಕಿಡ್ನಿ ವಿಫಲವಾಗಿ ಬಾಲಿವುಡ್ ಯುವನಟಿ ಮಿಶ್ತಿ ಮುಖರ್ಜಿಯವರು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
ಇತ್ತೀಚೆಗೆ ಯುವನಟಿಯರು ಸ್ಲಿಮ್ ಆಗಿ ಕಾಣಬೇಕೆಂದು ಡಯೆಟ್ ಮಾಡುವುದು ಕಮಾನ್ ಆಗಿದೆ. ಆದರೆ ಆರೋಗ್ಯ ಸಮಸ್ಯೆ ಇದ್ದರೂ ಡಯಟ್ ಮಾಡಿದರೆ ಅದು ತಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಂತೆಯೇ ಮಿಶ್ತಿಯವರ ಆರೋಗ್ಯ ಸಮಸ್ಯೆ ಇದ್ದರೂ ಡಯೇಟ್ ಮಾಡಿ ಈಗ 27 ವರ್ಷಕ್ಕೆ ಬಾರದ ಲೋಕಕ್ಕೆ ತೆರಳಿದ್ದಾರೆ.
ಬಾಲಿವುಡ್ ಮತ್ತು ಬೆಂಗಾಲಿ ವಿಡಿಯೋ ಆಲ್ಬಮ್ ಸಾಂಗ್ ಮತ್ತು ಕೆಲ ಚಿತ್ರದಲ್ಲಿ ನಟಿಸಿದ್ದ ಮಿಶ್ತಿ ಮುಖರ್ಜಿ ಅವರಿಗೆ ಕಿಡ್ನಿ ಸಮಸ್ಯೆ ಇತ್ತು. ಆದರೂ ಮಿಶ್ಠಿ ಅವರು ಸ್ಲಿಮ್ ಆಗಿ ಇರಬೇಕು ಎಂಬ ಕಾರಣಕ್ಕೆ ಕಟ್ಟಿನಿಟ್ಟಿನ ಕಿಟೋ ಡಯಟ್ ಮಾಡಿದ್ದಾರೆ. ಡಯಟ್ ವೇಳೆ ಅವರ ಕಿಡ್ನಿಯ ಮೇಲೆ ಹೆಚ್ಚು ಒತ್ತಡ ಬಿದ್ದಿದೆ. ಹೀಗಾಗಿ ಎರಡು ಕಿಡ್ನಿ ಫೇಲ್ ಆಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದ ಮಿಶ್ತಿ ಮತ್ತೆ ತಾನು ಸಿನಿಮಾಗೆ ಮರಳಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದರು. ಹೀಗಾಗಿ ಸ್ಲಿಮ್ ಆಗಬೇಕು ಎಂದು ಕಟ್ಟುನಿಟ್ಟಿನ ಡಯಟ್ ಮಾಡಿ ಈಗ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಮಿಶ್ತಿ ಮುಖರ್ಜಿಯವರು ಮೂಲತಃ ಪಶ್ಚಿಮ ಬಂಗಾಳದವರಾಗಿದ್ದಾರೆ. ಆದರೆ ಅವರ ಅಂತ್ಯಕ್ರಿಯೆಯನ್ನು ಮಿಶ್ತಿ ತಂದೆ, ತಾಯಿ ಮತ್ತು ಸಹೋದರ ಬೆಂಗಳೂರಿನಲ್ಲೇ ನೆರವೇರಿಸಿದ್ದಾರೆ.
ಮಿಶ್ತಿ ಮುಖರ್ಜಿಯವರು 2012ರಲ್ಲಿ ಲೈಫ್ ಕಿ ತೋಹ್ ಲಾಗ್ ಗಯೀ ಎಂಬ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಮಿಶ್ಠಿ 2013ರಲ್ಲಿ ಮೇ ಕೃಷ್ಣ ಹೂ ಎಂಬ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ನಂತರ ಗೋವಿಂದ ಆಲೆ ರೇ ಎಂಬ ಡ್ಯಾನ್ಸ್ ಕಾರ್ಯಕ್ರಮದಲ್ಲಿ ರಜನೀಶ್ ದುಗ್ಗಲ್ ಅವರೊಂದಿಗೆ ನೃತ್ಯ ಪ್ರದರ್ಶಿಸಿದ್ದರು. ಇದರ ಜೊತೆಗೆ ಬಾಲಿವುಡ್ ಹಾಗೂ ಬೆಂಗಾಲಿಯ ಹಲವು ವಿಡಿಯೋ ಆಲ್ಬಮ್ ಸಾಂಗ್‍ಗಲ್ಲಿ ಮಿಶ್ತಿ ಅಭಿನಯಿಸಿದ್ದಾರೆ.