ಕಿಡ್ನಿ ವೈಫಲ್ಯದಿಂದ ಕಿರುತೆರೆ ನಟಿ ಸಾವು

Public TV
1 Min Read
LEENA 1

ಮುಂಬೈ: ಕಿರುತೆರೆ ನಟಿಯೊಬ್ಬರು ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ಸಹನಟ ರೋಹನ್ ಮೆಹ್ರಾ ತಿಳಿಸಿದ್ದಾರೆ.

ನಟಿಯನ್ನು ಲೀನಾ ಆಚಾರ್ಯ ಎಂದು ಗುರುತಿಸಲಾಗಿದೆ. ಇವರು ಕ್ಲಾಸ್ ಆಫ್ 2020 ಹಾಗೂ ಸೆಥ್ ಜೀ ಧಾರಾವಾಹಿಗಳಲ್ಲಿ ನಟಿಸಿದ್ದರು. ನಟಿ ಶನಿವಾರ ದೆಹಲಿಯಲ್ಲಿ ಮೃತಪಟ್ಟಿರುವುದಾಗಿ ಲೀನಾ ಸಹನಟ ಮೆಹ್ರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

leena 2

ಈ ಸಂಬಂಧ ಇನ್‍ಸ್ಟಾದಲ್ಲಿ ಲೀನಾ ಜೊತೆಗಿನ ಫೋಟೋ ಹಾಕಿ ಬರೆದುಕೊಂಡಿರುವ ರೋಹನ್, ಕಳೆದ ವರ್ಷ ಇದೇ ಸಮಯದಲ್ಲಿ ಕ್ಲಾಸ್ ಆಫ್ 2020 ಶೂಟಿಂಗ್ ನಲ್ಲಿದ್ದೆವು. ನಾನೀಗ ನಿಮ್ಮಿಂದ ವಂಚಿತನಾಗಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ.

Untitled 4

ಚಿತ್ರಕಥೆಗಾರ, ನಟ ಅಭಿಷೇಕ್ ಗೌತಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಿಂದಿಯಲ್ಲಿ ಬರೆದುಕೊಂಡಿದ್ದು, ನನ್ನ ಉತ್ತಮ ಸ್ನೇಹಿತೆ ಹಾಗೆಯೇ ಶ್ರೇಷ್ಠ ಕಲಾವಿದೆ ಕೂಡ ಹೌದು. ಲೀನಾ ಆಚಾರ್ಯ ಅವರು ಯಾವಾಗಲೂ ಇತರರ ಪರ ನಿಲ್ಲುತ್ತಾರೆ. ಸದ್ಯ ಅವರು ಈ ಜಗತ್ತಿಗೆ ವಿದಾಯ ಹೇಳಿದ್ದಾರೆ. ಈ ಮೂಲಕ ನಾನು ನನ್ನ ಒಳ್ಳೆಯ ಸ್ನೇಹಿತೆಯೊಬ್ಬಳನ್ನು ಕಳೆದುಕೊಂಡಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ.

leena acharya 1606033998453

ಲೀನಾ ಅವರು ಕಳೆದ ಕೆಲ ವರ್ಷಗಳಿಂದ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *