– ಯುವತಿ ಪರ ವಕೀಲ ಹೇಳಿದ್ದೇನು..?
ಬೆಂಗಳೂರು: ಸಿಡಿ ಸಂತ್ರಸ್ತೆಯನ್ನು ಇಂದು ಕೂಡ ಎಸ್‍ಐಟಿ ವಿಚಾರಣೆಗೆ ಒಳಪಡಿಸಿದೆ.
ನಿನ್ನೆಯೇ ಎಲ್ಲಾ ವಿಚಾರಣೆ ಮುಗಿದಿದೆ ಅಂದ್ಕೊಂಡಿದ್ರು. ಆದರೆ ಪೋಷಕರು ನೀಡಿದ ಕಿಡ್ನಾಪ್ ಕೇಸ್ ಮತ್ತು ಬ್ಲಾಕ್‍ಮೇಲ್ ಕೇಸ್ ಸಂಬಂಧ ಆಡುಗೋಡಿಯ ಟೆಕ್ನಿಕಲ್ ಸೆಲ್‍ನಲ್ಲಿ ಸಂತ್ರಸ್ತೆಯನ್ನು ಎಸ್‍ಐಟಿ ಅಧಿಕಾರಿಗಳು ಬೆಳಗ್ಗೆಯಿಂದ ಸಂಜೆ 6ರವರೆಗೆ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ವಕೀಲ ಜಗದೀಶ್, ಮುಂದುವರಿದ ತನಿಖೆಯ ಭಾಗವಾಗಿ ಯುವತಿ ವಿಚಾರಣೆಗೆ ಬಂದಿದ್ದಾರೆ. ಆದರೆ ಆರೋಪಿ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಟೀಕೆ, ಆತಂಕಗಳಿಗೆ ಪೊಲೀಸ್ ಇಲಾಖೆ ತಲೆ ಕೆಡಿಸಿಕೊಂಡಂತೆ ಇಲ್ಲ. ಮುಂದೇನು ಮಾಡಬೇಕೆಂಬ ಬಗ್ಗೆ ಎಸ್‍ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ತನಿಖಾ ತಂಡ ಸಭೆ ನಡೆಸಿತು.
ಎಸ್‍ಐಟಿ ಕಾನೂನು ಪ್ರಕಾರವೇ ಕೆಲಸ ಮಾಡ್ತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಮರ್ಥನೆ ಮಾಡಿಕೊಂಡರು.