ಹಾಸನ: ಚನ್ನರಾಯಪಟ್ಟಣದ ಶ್ರವಣಬೆಳಗೂಳ ಕ್ಷೇತ್ರದ ಜೆಡಿಎಸ್ ಶಾಸಕ ಸಿಎನ್ ಬಾಲಕೃಷ್ಣ ಅವರು ಹಿರೀಸಾವೆ ಏತನೀರಾವರಿ ಯೋಜನೆಯ ಕಾಮಗಾರಿಯನ್ನು ಕಾಲ್ನಡಿಗೆಯಲ್ಲಿ ವೀಕ್ಷಣೆ ಮಾಡಿದ್ದಾರೆ.
ಹಿರಿಸಾವೆ ಸುತ್ತಮುತ್ತ ಇರುವ ಗ್ರಾಮಗಳ ಕೆರೆಗೆ ನೀರು ಹರಿಸಲು ಹಿರೀಸಾವೆ ಏತಾನೀರಾವರಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಯೋಜನೆ ಕಾಮಗಾರಿ ಹಂತದಲ್ಲಿದ್ದು, ಶೇ.75 ಕೆಲಸ ಮುಗಿದಿದೆ. ಈ ಯೋಜನೆಯನ್ನು ಶಾಸಕ ಬಾಲಣ್ಣ ಅವರೇ ಮುಂದೆ ನಿಂತು ಮಾಡಿಸುತ್ತಿದ್ದು, ಇಂದು ಅದರ ಪರಿಶೀಲನೆ ಹೋಗಿದ್ದಾರೆ.
ಹಿರಿಸಾವೆ ಏತ ನೀರಾವರಿ ಯೋಜನೆ ಕಾಮಗಾರಿ ಯನ್ನು ಕಾಲ್ನಡಿಗೆಯಲ್ಲಿ ಬಸುವಹಳ್ಳಿ, ಹುಳಿಗೆರೆ, ಚನ್ನೇನಹಳ್ಳಿ, ಬೊಮ್ಮನಹಳ್ಳಿ ಗ್ರಾಮದ ಹತ್ತಿರ ನೆಡಿಯುತಿರುವ ಕಾಮಗಾರಿ ಯನ್ನು ವೀಕ್ಷಿಸಿದ್ದೇನೆ ಕಾಮಗಾರಿ ವೇಗವಾಗಿ ನೆಡೆಯುತಿದೆ ಎಂದು ಈ ಮೂಲಕ ತಿಳಿಸುತ್ತೇನೆ pic.twitter.com/QqWC3Afi58
— CN.Balakrishna.MLA (@CNBalakrishna1) August 30, 2020
ಇಂದು ಬೆಳಗ್ಗೆ ಯಾವುದೇ ಅಧಿಕಾರಿಗಳನ್ನು ಕರೆದುಕೊಳ್ಳದೇ ಒಬ್ಬರೇ ಹೋಗಿ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಾಲಣ್ಣ ಹಿರೀಸಾವೆ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ವೀಕ್ಷಿಸಲು ಕಾಲ್ನಡಿಗೆಯಲ್ಲಿ ತೆರಳಿದ್ದೆ. ಬಸುವಹಳ್ಳಿ, ಹುಳಿಗೆರೆ, ಚನ್ನೇನಹಳ್ಳಿ, ಬೊಮ್ಮನಹಳ್ಳಿ ಗ್ರಾಮದ ಹತ್ತಿರ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ್ದೇನೆ. ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ಈ ಮೂಲಕ ತಿಳಿಸುತ್ತೇನೆ ಎಂದಿದ್ದಾರೆ.
ತೋಟಿ, ಆಲಗೊಂಡನಹಳ್ಳಿ, ಹಿರೀಸಾವೆ ಏತನೀರಾವರಿ ಯೋಜನೆಯ ಕಾಮಗಾರಿಗಳು ನಡೆಯುತ್ತಿದ್ದು, ಈ ಯೋಜನೆಯಿಂದ ಬಿದರೆ, ಚಿಕ್ಕರಸನಹಳ್ಳಿ, ಕೆಂಬಾಳು, ಎಂ.ಶಿವರ, ತಗಡೂರು, ಹೊಂಗೇಹಳ್ಳಿ, ಮರಗೂರು, ಕಾಮನಹಳ್ಳಿ, ಕಾಳಮಾರನಹಳ್ಳಿ, ಮಾದಗುಡ್ಡನಹಳ್ಳಿ, ಬಳಗಟ್ಟೆ, ದರಸಿಹಳ್ಳಿ, ಕಲ್ಲೆಸೋಮನಹಳ್ಳಿ, ಹಲಸಿನಹಳ್ಳಿ, ನಾಕನಕೆರೆ, ದಿಡಿಗ ಕೆರೆಗಳು ತುಂಬಲಿವೆ. ಇದರಿಂದ ಬಾಗೂರು, ಹಿರಿಸಾವೆ ಹೋಬಳಿಯ ಕುಡಿಯುವ ನೀರಿನ ಅಂತರ್ಜಲ ಸಮಸ್ಯೆ ನಿವಾರಣೆಯಾಗುತ್ತದೆ.