– ಡಿಸೆಂಬರ್ 10ರ ವರೆಗೆ ಸಂಚರಿಸಬಹುದು
ಬೆಂಗಳೂರು: ವಿದ್ಯಾರ್ಥಿಗಳು ಕಾಲೇಜಿಗೆ ಸಂಚರಿಸಲು ಅನುಕೂಲವಾಗುವಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದ್ದು, 2019-20ನೇ ಸಾಲಿನಲ್ಲಿ ವಿತರಿಸಲಾಗಿರುವ ಬಸ್ ಪಾಸ್ ಬಳಸಿ ಡಿಸೆಂಬರ್ 10ರ ವರೆಗೆ ಸಂಚರಿಸಲು ಅವಕಾಶ ನೀಡಿದೆ.
Advertisement
ಈ ಕುರಿತು ಸಾರಿಗೆ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನವೆಂಬರ್ 17ರಿಂದ ರಾಜ್ಯದ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು, ಪದವಿ, ವೂದ್ಯಕೀಯ, ತಾಂತ್ರಿಕ, ಡಿಪ್ಲೋಮಾ, ಅನುದಾನಿತ, ಅನುದಾನ ರಹಿತ ಕಾಲೇಜುಗಳಲ್ಲಿ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಳೆದ ವರ್ಷದ ಬಸ್ ಪಾಸ್ ಬಳಸಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
Advertisement
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 2019-20ನೇ ಸಾಲಿನಲ್ಲಿ ವಿತರಿಸಿರುವ ಪಾಸ್‍ಗಳನ್ನು ಬಳಸಿ ಡಿಸೆಂಬರ್ 10ರ ವರೆಗೆ ಬಸ್‍ಗಳಲ್ಲಿ ವಿದ್ಯಾರ್ಥಿಗಳು ಸಂಚರಿಸಬಹುದಾಗಿದೆ.
Advertisement
Advertisement
ವಿದ್ಯಾರ್ಥಿಗಳು ಈ ವರ್ಷ ಕಾಲೇಜಿಗೆ ದಾಖಲಾಗಿರುವ ಕುರಿತು ಪ್ರಸಕ್ತ ಸಾಲಿನ ಶುಲ್ಕ ಪಾವತಿ ರಶೀದಿ ಹಾಗೂ ಪಾಸ್ ತೋರಿಸಿ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಸಂಚರಿಸಬಹುದಾಗಿದೆ. ಸಾಮಾನ್ಯ ಹಾಗೂ ವೇಗದೂತ ಬಸ್‍ಗಳಲ್ಲಿ ಸಹ ವಿದ್ಯಾರ್ಥಿಗಳು ಸಂಚರಿಸಬಹುದಾಗಿದೆ.