– ಗೆಳೆಯರ ಬಳಿ ಪತ್ನಿಯನ್ನ ಕರೆದೊಯ್ದ ನೀಚ
– ಗ್ಯಾಂಗ್‍ರೇಪ್, ದೂರು ದಾಖಲಿಸಿದ ಸಂತ್ರಸ್ತೆ ತಾಯಿ
ಜೈಪುರ: ಪತಿಯೇ ಗೆಳೆಯರ ಜೊತೆ ಸೇರಿ ಪತ್ನಿಯನ್ನ ಅತ್ಯಾಚಾರಗೈದಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜಲೌರ್ ನಲ್ಲಿ ನಡೆದಿದೆ. ಘಟನೆ ಸಂಬಂಧ ಸಂತ್ರಸ್ತೆ ತಾಯಿ ಅಳಿಯ ಮತ್ತು ಆತನ ಗೆಳೆಯರ ವಿರುದ್ಧ ದೂರು ದಾಖಲಿಸಿದ್ದಾರೆ.
ಮಹಿಳೆಯ ಪತಿ ಸಿರೋಹಿಯ ಮಣ್ದಾರ್ ಗ್ರಾಮದಲ್ಲಿ ಕೆಲಸ ಮಾಡಿಕೊಂಡು ಪತ್ನಿ ಮತ್ತು ಮೂರು ಮಕ್ಕಳ ಜೊತೆ ವಾಸವಾಗಿದ್ದನು. ಜನವರಿ 12ರಂದು ಪತ್ನಿಯನ್ನ ಬೈಕ್ ನಲ್ಲಿ ಗೆಳೆಯರು ಇರುವಲ್ಲಿಗೆ ಕರೆದುಕೊಂಡು ಬಂದಿದ್ದಾನೆ. ಅದಾಗಲೇ ಕಾಮುಕನ ಗೆಳೆಯರಾದ ಅರ್ಜುನ್ ಸಿಂಗ್, ಸಿ.ರಾಮ್, ನಾರಾಯಣ್ ಪಾನಮತ್ತರಾಗಿದ್ದರು.
ಮಹಿಳೆಯನ್ನ ಬಲವಂತವಾಗಿ ಕೋಣೆಗೊಳಗೆ ಎಳೆದೊಯ್ದ ಕಾಮುಕರು ಬಾಗಿಲಿಗೆ ಕಾಲುಗಳನ್ನ ಕಟ್ಟಿ ಹಾಕಿ ಪತಿಯ ಸಮ್ಮುಖದಲ್ಲಿಯೇ ಒಬ್ಬರ ನಂತರ ಒಬ್ಬರು ಎರಗಿ ಅತ್ಯಾಚಾರಗೈದಿದ್ದಾರೆ. ಗೆಳೆಯರ ನಂತರ ಪತಿ ಸಹ ಒಪತ್ನಿಯನ್ನ ಅತ್ಯಾಚಾರಗೈದಿದ್ದಾನೆ.
ಘಟನೆ ನಡೆದ ಮರುದಿನ ತವರಿಗೆ ಬಂದ ಮಹಿಳೆ ತಾಯಿ ಮುಂದೆ ನಡೆದ ಘಟನೆಯನ್ನ ಹೇಳಿದ್ದಾರೆ. ವಿಷಯ ತಿಳಿದ ಸಂತ್ರಸ್ತೆ ತಾಯಿ ತಡಮಾಡದೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.
ಸಂತ್ರಸ್ತೆ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತೆಯ ಹೇಳಿಕೆನ್ನ ದಾಖಲಿಸಿಕೊಳ್ಳಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಘಟನೆ ಬಳಿಕ ನಾಲ್ವರು ನಾಪತ್ತೆಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಜಲೌರ್ ಡಿವೈಎಸ್‍ಪಿ ಕೈಲಾಶ್ ಕುಮಾರ್ ಹೇಳಿದ್ದಾರೆ.