ಕಾಲಿನ ಬೆರಳುಗಳಲ್ಲಿ ಉರಿಯೂತ ಕೊರೊನಾದ ಹೊಸ ಲಕ್ಷಣ – ತಜ್ಞರ ಮಾಹಿತಿ

Public TV
1 Min Read
corona symptoms

ನವದೆಹಲಿ: ಕೆಮ್ಮು, ನೆಗಡಿ, ಜ್ವರ, ಅಸ್ವಸ್ಥತೆ ಸೇರಿ ಹಲವು ಗುಣ ಲಕ್ಷಣಗಳನ್ನು ಹೊಂದಿರುವ ಕೊರೊನಾ ವೈರಸ್ ಸೋಂಕಿನ ಪಟ್ಟಿಗೆ ಮತ್ತೊಂದು ಹೊಸ ಲಕ್ಷಣವೊಂದು ಸೇರ್ಪಡೆಗೊಂಡಿದೆ. ಕಾಲು ಅಥಾವ ಕಾಲಿನ ಬೆರಳುಗಳಲ್ಲಿ ಉರಿಯೂತ ಕಂಡು ಬಂದರೆ ಅದು ಕೊರೊನಾ ವೈರಸ್‍ನ ಮತ್ತೊಂದು ಲಕ್ಷಣ ಎಂದು ತಜ್ಞರು ಹೇಳಿದ್ದಾರೆ.

ಯುರೋಪ್ ಮತ್ತು ಅಮೆರಿಕದ ಚರ್ಮರೋಗದ ತಜ್ಞರು ಕೊರೊನಾ ವೈರಸ್ ಸೋಂಕಿನ ಹೊಸ ಲಕ್ಷಣವೊಂದನ್ನು ಗುರುತಿಸಿದ್ದಾರೆ. ನಿರಂತರ ಅಧ್ಯಯನದ ಬಳಿಕ ಈ ತಿರ್ಮಾನಕ್ಕೆ ಬರಲಾಗಿದೆ. ಇಟಲಿಯಲ್ಲಿ ಕೆಲವು ಮಕ್ಕಳು ಮತ್ತು ಮಧ್ಯವಯಸ್ಕ ರೋಗಿಗಳ ಬೆರಳು ಮತ್ತು ಕಾಲುಗಳಲ್ಲಿ ಉರಿಯೂತ ಕಂಡ ಬಳಿಕ ಈ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಈ ವೇಳೆ ಹೊಸ ಲಕ್ಷಣದ ಬಗ್ಗೆ ಮಾಹಿತಿ ತಿಳಿದುಬಂದಿದೆ.

woman touching injured foot amp thumb 16x9

ಈ ಸ್ಥಿತಿಯನ್ನು ಫ್ರಾಸ್ಟ್ ಬೈಟ್ ಅಥವಾ ಪೆರ್ನಿಯೊ ಎಂದು ವೈದ್ಯರು ಕರೆದಿದ್ದಾರೆ. ಚಳಿ ಹೆಚ್ಚಿರುವ ಪ್ರದೇಶದಲ್ಲಿ ವಾಸಿಸುವ ಜನರ ಕಾಲುಗಳಲ್ಲಿ ಹೀಗೆ ಉರಿಯೂತ ಕಂಡುಬರುತ್ತದೆ. ಕಾಲಿನ ಬೆರಳುಗಳಲ್ಲಿನ ರಕ್ತನಾಳಗಳಲ್ಲಿ ಉಲ್ಬಣಗೊಳ್ಳುವ ಉರಿಯೂತ ಗಂಭೀರವಾದ ಸೆಳೆತವನ್ನು ಹೊಂದಿರುತ್ತದೆ.

coronavirus alert

ಇಟಲಿಯಲ್ಲಿ ಕೋವಿಡ್-19 ರೋಗಿಗಳ ಹೆಚ್ಚಿನ ಸಾಂದ್ರತೆಯಿರುವ ಪ್ರದೇಶಗಳಲ್ಲಿ ಚರ್ಮರೋಗ ತಜ್ಞರು ಕಾಲು ಅಥವಾ ಕಾಲಿನ ಬೆರಳುಗಳಲ್ಲಿ ಉರಿಯೂತ ಸಮಸ್ಯ ಹೆಚ್ಚು ಪ್ರಚಲಿತದಲ್ಲಿ ಇರುವುದನ್ನು ಪತ್ತೆ ಮಾಡಿದ್ದಾರೆ. ಹೀಗಾಗಿ ಈ ಸ್ಥಿತಿಗೆ ‘ಕೋವಿಡ್ ಟೋಸ್’ ಎಂದು ಅಡ್ಡ ಹೆಸರು ಇಟ್ಟಿದ್ದಾರೆ. ಅಮೆರಿಕನ್ ಅಕಾಡೆಮಿ ಆಫ್ ಡರ್ಮಾಟಾಲಜಿಸ್ಟ್ ಗೆ ಸಂಬಂಧಿಸಿದ ವೈದ್ಯರು ಕಾಲಿನ ಬೆರಳಲ್ಲಿ ಉರಿಯೂತ ಕಂಡು ಬಂದರೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಸಲಹೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *