ಬೆಂಗಳೂರು: ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಯನ್ನ ಅಪರಾಧಿ ಎಂದು ಸಿಸಿಹೆಚ್ 65 ಕೋರ್ಟ್ ಆದೇಶ ಹೊರಡಿಸಿದೆ. ಇಂದು ಅಪರಾಧಿ ಮಧುಕರ್ ರೆಡ್ಡಿಗೆ ಶಿಕ್ಷೆ ಪ್ರಕಟವಾಗಲಿದೆ.
ಸಿಸಿಹೆಚ್ 65 ಕೋರ್ಟ್ ನಿಂದ ಅಪರಾಧಿ ರೆಡ್ಡಿಗೆ ಶಿಕ್ಷೆ ಪ್ರಕಟವಾಗಲಿದೆ. ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್ ನಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿರುವಾಗ ಜ್ಯೋತಿ ಉದಯ್ ಎಂಬವರ ಮೇಲೆ ಮಧುಕರ್ ರೆಡ್ಡಿ ಮಾರಣಾಂತಿಕವಾಗಿ ಹಲ್ಲೆಗೈದು ತಲೆ ಮರೆಸಿಕೊಂಡಿದ್ದನು. 2013ರಲ್ಲಿ ಆರೋಪಿಯನ್ನ ಬಂಧಿಸಿ 2017ರಲ್ಲಿ ಅಪರಾಧಿ ರೆಡ್ಡಿ ವಿರುದ್ಧ ದೋಷರೋಪ ಪಟ್ಟಿ ಸಲ್ಲಿಸಲಾಗಿತ್ತು.
ಘಟನೆ ಸಂಬಂದ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಸತತ ಮೂರು ವರ್ಷಗಳ ಕಾಲ ವಿಚಾರಣೆ ನಡೆಸಿದ್ದರು. ಸತತ ವಿಚಾರಣೆ ಬಳಿಕ ನ್ಯಾಯಾಲಯ ಆರೋಪಿಯನ್ನ ಅಪರಾಧಿ ಎಂದು ಆದೇಶ ನೀಡಿತ್ತು. ಇಂದು ಮಧುಕರ್ ರೆಡ್ಡಿಯ ಶಿಕ್ಷೆ ಪ್ರಕಟವಾಗಲಿದೆ.