ಬಳ್ಳಾರಿ: ಮೈಲಾರಲಿಂಗೇಶ್ವರ ದೇವಸ್ಥಾನದ ಮುಂದೆ ಇರುವ ಶಿಬಾರದ ತ್ರಿಶೂಲ ಕಳಚಿಬಿದ್ದ ಘಟನೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕು ಮೈಲಾರದಲ್ಲಿ ನಡೆದಿದೆ.
ಮೈಲಾರಲಿಂಗೇಶ್ವರ ದೇವಸ್ಥಾನದ ಮಹಾದ್ವಾರ ಮಂಭಾಗದ ಶಿಬಾರ ತ್ರಿಶೂಲ ಕಳಚಿಬಿದ್ದಿದೆ. ಮುಂಜಾನೆ ಐದು ಗಂಟೆ ಸುಮಾರಿಗೆ ದೇವರ ಉತ್ಸವ ಮೂರ್ತಿಯ ಮೆರವಣಿಗೆ ಹೊರಟ್ಟಿತ್ತು. ಈ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ದೇವರ ಉತ್ಸವ ನಿಂತು ಮುಂದೆ ಸಾಗಿತು. ಜಾತ್ರೆಗೆ ಮುನ್ನವೇ ಅಪ ಶಕುನವಾಗಿದೆ. ಶಿಬಾರದ ಕಲಶ ಭಗ್ನವಾಗುತ್ತಿದ್ದಂತೆ ಭಕ್ತರು ಬೇಸರಗೊಂಡಿದ್ದಾರೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಎಸಿ ಪ್ರಕಾಶ್ ಅವರನ್ನು ಭಕ್ತರು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಪದ್ದತಿಯಂತೆ ಮೈಲಾರ ಕಾರ್ಣೀಕೋತ್ಸವ ಮಾಡಲು ಅವಕಾಶ ಕೋಡಬೇಕಿತ್ತು. ಸಂಪ್ರದಾಯದ ಪ್ರಕಾರ ಪ್ರತಿಷ್ಠಾಪನೆ ಮಾಡಿ ಎಂದು ಒತ್ತಾಯ ಮಾಡಿದರು. ಜಾತ್ರೆಗೆ ನಿರ್ಬಂಧ ಹೇರಿದ್ದರಿಂದ ಈ ಅಪಶಕುನ ನಡೆದಿದೆ ಎಂದು ಭಕ್ತರು ಅಭಿಪ್ರಾಯ ಪಟ್ಟಿದ್ದಾರೆ.