ನವದೆಹಲಿ: ಮುಂಜಾವಿನ ನಸುಕಿನಲ್ಲಿ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು 40 ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ದೆಹಲಿಯ ಪ್ರಾತಾಪ್ ನಗರದ ಕಾರ್ಖಾನೆಯೊಂದರಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ 3.45ರ ಸುಮಾರಿಗೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸೌಂದರ್ಯವರ್ಧಕಗಳು, ಆಟಿಕೆಗಳು ಮತ್ತು ಬ್ಯಾಗ್‍ತಯಾರಿಸುವ ಕಾರ್ಖಾನೆ ಇದಾಗಿದೆ. ಈ ವೇಳೆ ಫ್ಯಾಕ್ಟರಿ ಆವರಣದೊಳಗೆ 40 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
Advertisement
Advertisement
ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳಕ್ಕೆ 18 ಅಗ್ನಿಶಾಮಕದಳ ವಾಹನಗಳು ದೌಡಾಯಿಸಿದ್ದು, ಬೆಂಕಿಯನ್ನು ನಂದಿಸುವ ಕಾರ್ಯಾಚಾರ ನಡೆಸಿದ್ದಾರೆ. 40 ಕಾರ್ಮಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
Advertisement
Delhi: Fire breaks out at a factory in Pratap Nagar area. Fire tenders present at the spot. More details awaited. pic.twitter.com/R7ZvFXiOcM
— ANI (@ANI) February 27, 2021
Advertisement
ಎಲ್‍ಪಿಜಿ ಸಿಲಿಂಡರ್ ಸ್ಫೋಟಗೊಂಡ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 18 ಅಗ್ನಿಶಾಮಕ ಟೆಂಡರ್‍ಗಳು ಕಾರ್ಯನಿರ್ವಹಿಸುತ್ತವೆ, ಬೆಂಕಿಯನ್ನು ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿ ರಾಜಿಂದರ್ ಅಟ್ವಾಲ್ ಹೇಳಿದ್ದಾರೆ. ಈ ಅವಘಢದ ಸಾವು ನೋವುಗಳ ಕುರಿತಾದ ಕಚಿತಮಾಹಿತಿ ಬರಬೇಕಿದೆ.