ಅಹಮದಾಬಾದ್: ಇಕೋ ಕಾರುಗಳ ಸೈಲೆನ್ಸ್ ರ್ ಗಳನ್ನು ಕದಿಯುವ ಮೂಲಕ ಲಕ್ಷಾಂತರ ರೂಪಾಯಿ ಹಣಗಳಿಸುತ್ತಿದ್ದ ಕಳ್ಳರನನ್ನು ಪೊಲೀಸರು ಬಂಧಿಸಿರುವ ಘಟನೆ ಅಹಮದಬಾದ್‍ನಲ್ಲಿ ನಡೆದಿದೆ.
ಕೇವಲ ಒಂದು ವಾರದೊಳಗೆ ಕಳ್ಳರು 21 ಲಕ್ಷ ರೂಪಾಯಿ ಮೌಲ್ಯದ ಸೈಲೆನ್ಸರ್ ಗಳನ್ನು ಕದ್ದಿದ್ದಾರೆ. ಅದರಲ್ಲೂ ಮಾರುತಿ ಸುಜುಕಿ ತಯಾರಿಸಿದ ಇಕೋ ವ್ಯಾನ್‍ಗಳೇ ಇವರ ಮುಖ್ಯ ಟಾರ್ಗೆಟ್. ಒಂದು ಸೈಲೆನ್ಸರ್ ಬೆಲೆ 57,272ರೂ ಆಗಿದ್ದು, ಈ ಚಲಾಕಿ ಕಳ್ಳರು ಕೇವಲ ಒಂದೆರಡು ನಿಮಿಷಗಳಲ್ಲಿ ವಾಹನದ ಕೆಳಗೆ ಇರುವ ಸೈಲೆನ್ಸರ್ ತೆಗೆದು ಹಾಕಿ ಕದಿಯುತ್ತಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
ಸನಾಥಲ್‍ನ ಕಿರಣ್ ಮೋಟಾರ್ಸ್ ಮತ್ತು ಬಕ್ರೋಲ್‍ನಲ್ಲಿರು ಸ್ಟಾಕ್‍ಯಾರ್ಡ್‍ನಲ್ಲಿ ನಿಲ್ಲಿಸಿದ್ದ ಸುಮಾರು 33 ವಾಹನಗಳ ಸೈಲೆನ್ಸರ್ ಗಳನ್ನು ಖದೀಮರು ಕದ್ದಿದ್ದಾರೆ. ಈ ಕಳ್ಳರು ಈ ವರೆಗೂ ಸುಮಾರು 20.59 ರೂ. ಮೌಲ್ಯದ ಸೈಲೆನ್ಸರ್ ಗಳನ್ನು ಕದಿದ್ದಾರೆ. ಕಳೆದ ವರ್ಷ ಇದೇ ರೀತಿ 30 ಇಕೋ ವ್ಯಾನ್‍ಗಳ ಸೈಲೆನ್ಸರ್‍ಗಳನ್ನು ಕದಿಯುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದರು.