ವಾಷಿಂಗ್ಟನ್: ರಸ್ತೆಯಲ್ಲಿ ಅನ್‍ಲಾಕ್ ಮಾಡಿದ್ದ ಕಾರಿನಲ್ಲಿ ಕುಳಿತಿದ್ದ ಮಗು ಮತ್ತು ಕಾರನ್ನು ಕದ್ದು ಕಳ್ಳ ಪರಾರಿಯಾಗಿದ್ದಾನೆ. ಬಳಿಕ ಮಗುವನ್ನು ಹಿಂದಿರುಗಿಸುವ ವೇಳೆ ಮಹಿಳೆಗೆ ಕಳ್ಳ ಉಪದೇಶ ಮಾಡಿರುವ ಘಟನೆ ಯುನೈಟೆಡ್ ಸ್ಟೇಟ್‍ನ ಒರೆಗಾನ್ ನಲ್ಲಿ ನಡೆದಿದೆ. ಇದೀಗ ಒರೆಗಾನ್ ಅಧಿಕಾರಿಗಳು ಕಳ್ಳನನ್ನು ಹುಡುಕಾಡುತ್ತಿದ್ದಾರೆ.
Advertisement
ಮಾಂಸದ ಅಂಗಡಿ ಎದುರು ಕಾರನ್ನು ನಿಲ್ಲಿಸಿದ್ದಾಳೆ. ಅಲ್ಲದೆ ನಾಲ್ಕು ವರ್ಷದ ಪುಟ್ಟ ಟಿನ್ನಿ ಟಾಟ್ ಮಗುವನ್ನು ಕಾರಿನಲ್ಲಿ ಬಿಟ್ಟು ಸಮೀಪದ ಅಂಗಡಿಗೆ ಮಹಿಳೆ ತೆರಳಿದ್ದಾಳೆ. ಇದೇ ವೇಳೆ ಶಂಕಿತನೊಬ್ಬ ಅನ್‍ಲಾಕ್ ಮಾಡಿದ ಕಾರಿನೊಳಗೆ ಹತ್ತಿ ಶೀಘ್ರವಾಗಿ ಅರ್ಧ ಬ್ಲಾಕ್ ಲೂಪ್ ಮಾಡಿ ವಾಹವನ್ನು ಚಲಾಯಿಸಿದ್ದಾನೆ. ಕಾರಿನೊಳಗೆ ಮಗು ಇದೆ ಎಂಬುದನ್ನು ತಿಳಿದ ಬಳಿಕ ಮಿನಿ-ಮಾರ್ಟ್ ಸಮೀಪ ಮಗುವನ್ನು ಮಹಿಳೆಗೆ ಹಿಂದಿರುಗಿಸಿದ್ದಾನೆ.
Advertisement
ಅರ್ಧ ದಾರಿಗೆ ಹೋದ ನಂತರ ಮಗು ಕಾರಿನಲ್ಲಿ ಇದೆ ಎಂದು ತಿಳಿದ ಕಳ್ಳ ಮಗುವನ್ನು ಮಹಿಳೆಗೆ ಹಿಂದಿರುಗಿಸುವ ಸಲುವಾಗಿ ಮತ್ತೆ ಅದೇ ಸ್ಥಳಕ್ಕೆ ಬಂದ್ದಾನೆ. ಆನ್ ಲಾಕ್ ಮಾಡಿದ ಕಾರಿನಲ್ಲಿ ಮಗುವನ್ನು ಒಬ್ಬಂಟಿಯಾಗಿ ಹಾಗೆಲ್ಲಾ ಬಿಡಬಾರದು ಎಂದು ಮಹಿಳೆಗೆ ಉಪದೇಶ ನೀಡಿ ಮಗುವನ್ನು ಎತ್ತಿಕೊಳ್ಳುವಂತೆ ಆದೇಶಿಸಿದ್ದಾನೆ. ಅಲ್ಲದೆ ಈ ವಿಚಾರವಾಗಿ ಪೊಲೀಸರಿಗೆ ಕರೆ ಮಾಡಿ ತಿಳಿಸುವುದಾಗಿ ಕಳ್ಳನೇ ಆಕೆಗೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಇಲಾಖೆಯ ವಕ್ತಾರ ಅಧಿಕಾರಿ ಮ್ಯಾಟ್ ಹೆಂಡರ್ಸನ್ ಹೇಳಿದ್ದಾರೆ.
Advertisement
Advertisement
ವರದಿಯಲ್ಲಿ ಪೊಲೀಸರು ಇದರಲ್ಲಿ ಮಹಿಳೆಯ ಅಪರಾಧವೇನಿಲ್ಲ. ಮಗು ಗಲಾಟೆ ಮಾಡುತ್ತಿದೆ ಎಂದು ಕಾರಿನಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಆದರೆ ಅವಳು ಕಾರಿನ ಕೀಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಬೇಕಿತ್ತು ಎಂದು ತಿಳಿಸಿದರು.
ಬಳಿಕ 10 ಮೈಲಿ ದೂರದ ಪೋರ್ಟ್ ಲಾಂಡ್ ಬಳಿ ಕಾರನ್ನು ಪೊಲೀಸರು ಪತ್ತೆ ಹಚ್ಚಿದ್ದು, ತನಿಖೆ ವೇಳೆ ಕಳ್ಳನಿಗೆ ಸುಮಾರು 20 ರಿಂದ 30 ವರ್ಷ ವಯಸ್ಸಾಗಿದೆ. ಹಲವು ಬಣ್ಣಗಳನ್ನು ಹೊಂದಿರುವ ಮಾಸ್ಕ್ ಧರಿಸಿದ್ದನು ಎಂದು ತಿಳಿದು ಬಂದಿದ್ದು, ಸದ್ಯ ಪೊಲೀಸರು ಕಳ್ಳನ ಹುಡುಕಾಟದಲ್ಲಿದ್ದಾರೆ.