ವಾಷಿಂಗ್ಟನ್: ಯುಎಸ್‍ನ ಉತ್ತರ ಕರೊಲಿನಾದಲ್ಲಿ ಮಂಗಳವಾರ ಪಿಟ್ ಬೋವಾ ಕನ್ಸ್‍ಟ್ರಿಕ್ಟರ್ ಎಂಬ ಹಾವೊಂದು ಕಾರಿನ ಡ್ಯಾಶ್‍ಬೋರ್ಡ್‍ನಲ್ಲಿ ಸಿಲುಕಿಕೊಂಡಿದೆ.
ಕಾರಿನ ಡ್ಯಾಶ್‍ಬೋರ್ಡ್‍ನಲ್ಲಿ ಸಿಲುಕಿದ್ದ ಹಾವನ್ನು ರಕ್ಷಣೆ ಮಾಡಲು ಸ್ಟಾನ್ಲಿ ಕೌಂಟಿ ಅನಿಮಲ್ ಪ್ರೊಟೆಕ್ಟಿವ್ ಸರ್ವೀಸಸ್ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಬಳಿಕ ಕಾರಿನ ಡ್ಯಾಶ್‍ಬೋರ್ಡ್‍ನನ್ನು ಕಿತ್ತು ಹಾಕಿ ಹಾವನ್ನು ರಕ್ಷಣೆ ಮಾಡಿದ್ದಾರೆ.
ಇನ್ನೂ ಹಾವಿನ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿರುವ ಸ್ಟಾನ್ಲಿ ಕೌಂಟಿ ಅನಿಮಲ್ ಪ್ರೊಟೆಕ್ಟಿವ್ ಸರ್ವೀಸಸ್, ಕಾರಿನ ಡ್ಯಾಶ್ ಬೋರ್ಡ್‍ನಲ್ಲಿ ತಾನಾಗಿ ತಾನೇ ಸಿಲುಕಿಕೊಂಡಿದ್ದ ಬೋವಾ ಕನ್ಸ್‍ಟ್ರಕ್ಟರ್ ಹಾವನ್ನು ನಮ್ಮ ಅಧಿಕಾರಿಗಳು ಯಾವುದೇ ಹಾನಿಯಾಗದಂತೆ ಹೊರಗೆ ತೆಗೆದಿದ್ದಾರೆ. ಇದೀಗ ಹಾವು ಹಿಂದುರುಗಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
It is never a dull moment at APS, and yesterday was not any different! Our officers were dispatched out to a situation…
Posted by Stanly County Animal Protective Services on Tuesday, February 2, 2021
ಇನ್ನೂ ಹಾವಿನ ಬಗ್ಗೆ ನೆಟ್ಟಿಗರು ಕೇಳಿದ ಪ್ರಶ್ನೆಗೆ 8.5 ಅಡಿ ಉದ್ದವಿದ್ದು, 18 ಕೆಜಿ ತೂಕವಿದೆ ಎಂದು ಸ್ಟಾನ್ಲಿ ಕೌಂಟಿ ಅನಿಮಲ್ ಪ್ರೊಟೆಕ್ಟಿವ್ ಸರ್ವೀಸಸ್ ಅಧಿಕಾರಿಗಳು ತಿಳಿಸಿದ್ದಾರೆ.