ನವದೆಹಲಿ: ವೀಕೆಂಡ್ ಲಾಕ್‍ಡೌನ್ ಪಾಲಿಸದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ದಂಪತಿ ಪೊಲೀಸ್‍ಗೆ ಅವಾಜ್ ಹಾಕಿರುವ ಘಟನೆ ದೆಹಲಿಯ ದರಿಯಾಗಂಜ್‍ನಲ್ಲಿ ನಡೆದಿದೆ.
ಕಾರಿನ ಒಳಗೆ ಮಾಸ್ಕ್ ಧರಿಸಿಲ್ಲ ಎಂದು ದಂಪತಿಯನ್ನು ಪೊಲೀಸರು ತಡೆದಿದ್ದಾರೆ. ಅಲ್ಲದೆ ಕಫ್ರ್ಯೂ ಪಾಸ್ ಸಹ ಅವರ ಬಳಿ ಇರಲಿಲ್ಲ. ಈ ವೇಳೆ ತಾವು ಮಾಡಿದ ತಪ್ಪನ್ನು ತಿದ್ದುಕೊಂಡು ಸೌಮ್ಯವಾಗಿ ವರ್ತಿಸದೆ ದಂಪತಿ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.
Advertisement
कोरोना के इस दौर में ऐसे जाहिल लोग भी याद किये जाएंगे ,कार में बैठा एक कपल बिना कर्फ्यू पास के दरियागंज इलाके में घूम रहा था वो भी बिना मास्क के,पुलिस ने जब रोका तो बोला अपने दोस्त को किस करूंगी,पुलिस ने केस दर्ज कर दोनों को गिरफ्तार किया pic.twitter.com/Z9iCnmp4Hu
— Mukesh singh sengar मुकेश सिंह सेंगर (@mukeshmukeshs) April 18, 2021
Advertisement
ನಾನು ಇಲ್ಲಯೇ ನನ್ನ ಗಂಡನಿಗೆ ಮುತ್ತು ಇಡುತ್ತೇನೆ ನೀವು ನನ್ನನ್ನು ತಡೆಯಬಹುದೇ? ಕಾರ್ ಏಕೆ ನಿಲ್ಲಿಸಿದ್ದೀರಿ? ಎಂದು ಮಹಿಳೆ ಪೊಲೀಸರಿಗೆ ಹೇಳುತ್ತಾ ಕೂಗಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Advertisement
ಕಾರಿನಲ್ಲಿದ್ದಾಗಲೂ ಮಾಸ್ಕ್ ಧರಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ ಎಂದು ಪೊಲೀಸರು ಮಹಿಳೆಗೆ ಮನವರಿಕೆ ಮಾಡಿದರೂ ಸುಮ್ಮನಾಗದೆ ದಂಪತಿ ಪೊಲೀಸರ ಜೊತೆಗೆ ವಾಗ್ವಾದ ಮಾಡಿದ್ದಾರೆ. ಪೊಲೀಸರು ಮಹಿಳಾ ಪೊಲೀಸ್ ಕರೆಸಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಮಹಿಳೆಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
Advertisement