Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾರಾಗೃಹದಲ್ಲಿ ಕೋವಿಡ್ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಿ – ಬೊಮ್ಮಾಯಿ ಸೂಚನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕಾರಾಗೃಹದಲ್ಲಿ ಕೋವಿಡ್ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಿ – ಬೊಮ್ಮಾಯಿ ಸೂಚನೆ

Bengaluru City

ಕಾರಾಗೃಹದಲ್ಲಿ ಕೋವಿಡ್ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಿ – ಬೊಮ್ಮಾಯಿ ಸೂಚನೆ

Public TV
Last updated: April 29, 2021 9:16 pm
Public TV
Share
2 Min Read
FotoJet 6 36
SHARE

-ಕೋವಿಡ್ ಸೋಂಕು ಹಿನ್ನೆಲೆ ಪರಪ್ಪನ ಅಗ್ರಹಾರಕ್ಕೆ ಭೇಟಿ

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಕೋವಿಡ್ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸುವಂತೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ರಾಜ್ಯದ ಕಾರಾಗೃಹಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಬೆನ್ನ ಹಿಂದೆಯೇ ಬಸವರಾಜ ಬೊಮ್ಮಾಯಿ ಅವರು ಗುರುವಾರ ಸಂಜೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೋವಿಡ್ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳು ಕುರಿತು ಪರಿಶೀಲನೆ ನಡೆಸಿದರು. ಸೋಂಕು ಹರಡುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

FotoJet 8 37

ಕಾರಾಗೃಹಕ್ಕೆ ಭೇಟಿ ನೀಡಿದ ತಕ್ಷಣವೇ ಸಚಿವರು ಕಾರಾಗೃಹದ ಆಸ್ಪತ್ರೆಗೆ ಭೇಟಿ ನೀಡಿದರು. 100 ಹಾಸಿಗೆಯ ಆಸ್ಪತ್ರೆಯಲ್ಲಿನ ವೈದ್ಯಕೀಯ ವ್ಯವಸ್ಥೆಗಳನ್ನು ಅವಲೋಕಿಸಿದರು. ಕಾರಾಗೃಹದ ವೈದ್ಯಾಧಿಕಾರಿಗಳಿಂದ ಅಲ್ಲಿನ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆಗಳ ಕುರಿತು ಮಾಹಿತಿ ಪಡೆದರು. ಸೋಂಕು ಕಾರಾಗೃಹದಲ್ಲಿನ ಇತರ ಕೈದಿಗಳಿಗೆ ಹರಡದಂತೆ ಕಟ್ಟೆಚ್ಚರವಹಿಸುವಂತೆ ವೈದ್ಯಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ನಂತರ ಕಾರಾಗೃಹದಲ್ಲಿನ ಬಾನುಲಿ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಾನೂಲಿ ಮೂಲಕ ಕಾರಾಗೃಹದ ಎಲ್ಲ ಕೈದಿಗಳನ್ನು ಉದ್ದೇಶಿಸಿ ಮಾತನಾಡಿದರು. ಕೋವಿಡ್ ಎರಡನೆಯ ಅಲೆಯ ವಿರುದ್ಧ ನಮ್ಮ ಹೋರಾಟ ಸಾಗುತ್ತಿದೆ. ಈ ಸೋಂಕು ತಗುಲದಂತೆ ಮುನ್ನೆಚ್ವರಿಕೆ ವಹಿಸಿ ಎಂದು ಅವರು ಕೈದಿಗಳಿಗೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕೈದಿಗಳ ಜತೆ ಸಮಾಲೋಚನೆ ನಡೆಸಿದರು. ಅವರ ಅಹವಾಲುಗಳನ್ನು ಆಲಿಸಿದರು. ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡುತ್ತಿರುವ ಕುರಿತು ಕೈದಿಗಳಿಗೆ ಸಚಿವರು ಮಾಹಿತಿ ನೀಡಿದರು. ಕೈದಿಗಳ ಅಹವಾಲುಗಳನ್ನು ಆಲಿಸಿ ಅವುಗಳನ್ನು ಬಗೆಹರಿಸುವ ಸಂಬಂಧ ಮಂಡಳಿಯೊಂದನ್ನು ರಚಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

FotoJet 9 28

ಕಾರಾಗೃಹ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಒಟ್ಟು 49 ಕಾರಾಗೃಹಗಳಿವೆ. ಅವುಗಳಲ್ಲಿ 240 ಕೈದಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಕೋವಿಡ್ ರೋಗ ಲಕ್ಷಣಗಳು ಕಂಡುಬಂದ ಕೈದಿಗಳನ್ನು ತಕ್ಷಣವೇ ತಪಾಸಣೆಗಳ ಪಡಿಸಲಾಗುತ್ತಿದೆ. ಸೋಂಕು ತಗುಲಿರುವ ಕೈದಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೋವಿಡ್ ನಿಂದ ಗುಣಮುಖರಾದ ನಂತರವೇ ಅವರನ್ನು ಕೇಂದ್ರ ಕಾರಾಗ್ರಹಕ್ಕೆ ಕರೆಸಿಕೊಡಲಾಗುತ್ತಿದೆ.

ಹೊಸ ಕೈದಿಗಳು ಕಾರಾಗ್ರಹಕ್ಕೆ ಬಂದರೆ ಅವರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತಿದೆ. ನಂತರ ಅವರನ್ನು ಆರ್‍ಟಿಪಿಸಿಆರ್ ಟೆಸ್ಟ್‍ಗೆ ಒಳಪಡಿಸಲಾಗುತ್ತದೆ. ಟೆಸ್ಟ್‍ನಲ್ಲಿ ನೆಗೆಟಿವ್ ವರದಿ ಬಂದ ನಂತರವಷ್ಟೇ ಅವರಿಗೆ ಕಾರಾಗೃಹದೊಳಗೆ ಪ್ರವೇಶ ಅವಕಾಶ ಕಲ್ಪಿಸಲಾಗುತ್ತಿದೆ. ಈ ರೀತಿ ಎಲ್ಲ ಕಾರಾಗೃಹಗಳಲ್ಲಿ ಕೋವಿಡ್ ವಿಚಾರವಾಗಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು. ಕಾರಾಗೃಹ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

FotoJet 7 39

ಕೋವಿಡ್ ವಿರುದ್ಧ ಹೊರಾಟಕ್ಕೆ 5 ಕೋಟಿ : ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ ಕೋವಿಡ್ ಹೋರಾಟಕ್ಕೆ ಬೇಕಾದ ಅಗತ್ಯ ವೈದ್ಯಕೀಯ ಉಪಕರಣ ಮತ್ತು ಸೋಂಕು ನಿವಾರಕ ಔಷಧೋಪಚಾರ ಗಳಿಗಾಗಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗುತ್ತಿದೆ. ಎರಡು ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಐದು ಕೋಟಿಗೆ ಹೆಚ್ಚಿಸಲಾಗಿದೆ. ಎಸ್‍ಡಿಆರ್‍ಎಫ್ ನಿಧಿ ಅಡಿ ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಚಿವ ಬಸವರಾಜ್ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.

TAGGED:Basavaraj BommaibengaluruCovidPublic TVಕಾರಾಗೃಹಕೋವಿಡ್ಪಬ್ಲಿಕ್ ಟಿವಿ jailಬಸವರಾಜ್ ಬೊಮ್ಮಾಯಿಬೆಂಗಳೂರು
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ವಿರೋಶ್‌ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ 11 ಮಂದಿಗೆ ಆಹ್ವಾನ
Cinema Latest Sandalwood Top Stories
Vijay Deverakonda
Rashmika-Vijay | ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!
Cinema Latest Main Post Sandalwood
Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories
Ranveer Singh Rishab Shetty Kantara
ಸೂಪರ್ ಸ್ಟಾರ್ ಆದ ಮಾತ್ರಕ್ಕೆ ಹೇಗೆ ಬೇಕಾದ್ರೂ ವರ್ತಿಸಬಹುದಾ? – ರಣವೀರ್ ಸಿಂಗ್‌ಗೆ ಹೈಕೋರ್ಟ್ ಚಾಟಿ
Bengaluru City Cinema Court Karnataka Latest Top Stories

You Might Also Like

Anupama Singh
Latest

ಜಮ್ಮು-ಕಾಶ್ಮೀರದ ಬಜೆಟ್‌ ನಿಮ್ಮ ಐಎಂಎಫ್‌ ಸಾಲಕ್ಕಿಂತಲೂ 2 ಪಟ್ಟು ಹೆಚ್ಚಿದೆ: ಪಾಕ್‌ಗೆ ಭಾರತ ತರಾಟೆ

Public TV
By Public TV
42 minutes ago
Telanganas Monthly Salary Surges 2 Lakhs To Senior Sweepers 7 Lakhs To Engineers
Latest

ತೆಲಂಗಾಣದಲ್ಲಿ ಹಿರಿಯ ನೈರ್ಮಲ್ಯ ಕಾರ್ಮಿಕರಿಗೆ ತಿಂಗಳಿಗೆ 2 ಲಕ್ಷ ಸಂಬಳ!

Public TV
By Public TV
59 minutes ago
Eshwar Khandre
Bengaluru City

ವಾಯು ಗುಣಮಟ್ಟ ಸೂಚ್ಯಂಕ 100 ಗಡಿ ದಾಟಿದರೆ ಜಿಬಿಎಗೆ ನೋಟಿಸ್ ನೀಡಿ: ಈಶ್ವರ್ ಖಂಡ್ರೆ ಸೂಚನೆ

Public TV
By Public TV
2 hours ago
Om birla Justice yashwant varma
Latest

ನ್ಯಾ. ವರ್ಮಾ ಪ್ರಕರಣ ತನಿಖಾ ಸಮಿತಿ ಮರುರಚಿಸಿದ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ

Public TV
By Public TV
2 hours ago
Auto Rickshaw Topples Due To A Monkey In Koratagere Tumakuru
Districts

ಕೋತಿ ರಕ್ಷಿಸಲು ಸಡನ್‌ ಬ್ರೇಕ್‌ – ಆಟೋ ಚಾಲಕ‌‌ ಸಾವು

Public TV
By Public TV
2 hours ago
Gruhalakshmi Scheme
Bengaluru City

Exclusive | ಸತ್ತವರ ಖಾತೆಗೆ 79 ಕೋಟಿ ಗೃಹಲಕ್ಷ್ಮಿ ಹಣ ಜಮೆ – 2.30 ಲಕ್ಷ ಫಲಾನುಭವಿಗಳ ಅಕೌಂಟ್ ಬ್ಲಾಕ್‌!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?