– ಅಂಬುಲೆನ್ಸ್ ಬಾರದೇ ಮೃತಪಟ್ಟ ಅಧಿಕಾರಿ
ಕಾರವಾರ: ಹಾರಾಡುತ್ತಿರುವ ವೇಳೆ ಗಾಳಿಗೆ ಪ್ಯಾರಾ ಮೋಟಾರಿನ ದಾರ ತುಂಡಾಗಿ ಕಾರವಾರದ ರವೀಂದ್ರನಾಥ ಠಾಗೋರ್ ಕಡಲಿನಲ್ಲಿ ಪ್ಯಾರಾ ಮೋಟರ್ ಪತನಗೊಂಡಿದೆ. ಜೊತೆಗೆ ಅದರಲ್ಲಿದ್ದ ನೌಕಾನೆಲೆಯ ಕ್ಯಾಪ್ಟನ್ ಒಬ್ಬರು ಸಾವನ್ನಪ್ಪಿದ್ದಾರೆ.
ಮಾರ್ಗದರ್ಶಕನ ಜೊತೆ ಪ್ಯಾರಾ ಮೋಟಾರಿನಲ್ಲಿ ಹಾರಾಟ ನಡೆಸುತ್ತಿದ್ದ ಆಂಧ್ರಪ್ರದೇಶ ಮೂಲದ ನೌಕಾ ನೆಲೆಯ ಕ್ಯಾಪ್ಟನ್ ಮಧುಸೂಧನ್ ರೆಡ್ಡಿ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದ್ದಾರೆ. ಪ್ಯಾರಾ ಮೋಟಾರ್ ಹಾರುತ್ತಿರುವ ವೇಳೆ ಗ್ಲೈಡರಿನ ಮೇಲ್ಭಾಗದ ಪ್ಯಾರಾಚೂಟ್ ದಾರ ಹರಿದಿದ್ದೇ ಘಟನೆಗೆ ಕಾರಣವಾಗಿದೆ.
ದಾರ ಹರಿದ ವೇಳೆ ಗಾಳಿ ಹೆಚ್ಚಿದ್ದರಿಂದ ಇಂಜಿನ್ ಹಾಗೂ ಪೈಲೆಟ್ ದೇಹಕ್ಕೆ ಈ ನೈಲನ್ ದಾರಗಳು ಸುತ್ತಿದ್ದು ಗ್ಲೈಡರಿನೊಂದಿಗೆ ಇಬ್ಬರೂ ನೀರಿನೊಳಗೆ ಬಿದ್ದಿದ್ದಾರೆ. ಈ ವೇಳೆ ಮಾರ್ಗದರ್ಶಕ ಕ್ಯಾಪ್ಟನ್ ವಿದ್ಯಾದರ್ ವೈದ್ಯ ಅಪಾಯದಿಂದ ಪಾರಾಗಿದ್ದು, ಪ್ರವಾಸಿಗ ಆಂಧ್ರ ನೌಕಾನಲೆಯ ಕ್ಯಾಪ್ಟನ್ ಮಧುಸೂದನ್ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಅವರನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಬಾರದ ಅಂಬ್ಯುಲೆನ್ಸ್
ಘಟನೆ ನಡೆದು ಅರ್ಧ ಗಂಟೆಗೂ ಮೇಲಾದರೂ ಒಂದೂ ಅಂಬ್ಯುಲೆನ್ಸ್ ಕೂಡ ಸ್ಥಳಕ್ಕೆ ಬಂದಿರಲಿಲ್ಲ. ಮಾರುದೂರದಲ್ಲಿ ಜಿಲ್ಲಾ ಆಸ್ಪತ್ರೆ ಇದ್ದರೂ, ಅಂಬ್ಯುಲೆನ್ಸ್ ಗಾಗಿ ಗೋಗರೆದರೂ ಬಾರದ ಕಾರಣ ನಗರ ಠಾಣೆಯ ಪಿಎಸ್‍ಐ ಸಂತೋಷ್ ಅವರ ಜೀಪಿನಲ್ಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿಸಲಾಗಿತ್ತು. ಆದರೇ ಕ್ಯಾಪ್ಟನ್ ವಿದ್ಯಾದರ್ ವೈದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಕ್ಯಾಪ್ಟನ್ ಮಧುಸೂಧನ್ ರೆಡ್ಡಿ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.